Tuesday, August 4, 2026

BDA Apartments

Home Front Page ಬೈಕ್ ನಲ್ಲಿ ಅಡಗಿದ್ದ ಹಾವು ರಕ್ಷಿಸಿದ ಉರಗ ತಜ್ಞ ಸ್ನೇಕ್ ಶಾಮ್ ಪುತ್ರ…

ಬೈಕ್ ನಲ್ಲಿ ಅಡಗಿದ್ದ ಹಾವು ರಕ್ಷಿಸಿದ ಉರಗ ತಜ್ಞ ಸ್ನೇಕ್ ಶಾಮ್ ಪುತ್ರ…

ಮೈಸೂರು,ಅಕ್ಟೋಬರ್,11,2020(www.justkannada.in): ದ್ವಿಚಕ್ರ ವಾಹನದಲ್ಲಿ ಅಡಗಿದ್ದ ಹಾವನ್ನ  ಖ್ಯಾತ ಉರಗ ತಜ್ಞ ಸ್ನೇಕ್ ಶಾಮ್ ಅವರ ಪುತ್ರ ರಕ್ಷಣೆ ಮಾಡಿದ್ದಾರೆ.mysore-rescued-snake-hiding-bike-snake-sham-son

ಮೈಸೂರಿನ ಕೆ‌. ಆರ್‌‌.ಎಸ್ ಮುಖ್ಯರಸ್ತೆಯಲ್ಲಿರುವ ಆದಿತ್ಯ ಪೆಟ್ರೋಲ್ ಬಂಕ್ ಬಳಿ ದ್ವಿಚಕ್ರವಾಹನದಲ್ಲಿ ಅಡಗಿದ್ದ ಹಾವನ್ನ ಸ್ನೇಕ್ ಶಾಮ್ ಅವರ ಪುತ್ರ ಸೂರ್ಯ ಕೀರ್ತಿ ರಕ್ಷಣೆ ಮಾಡಿದ್ದಾರೆ. ಆದಿತ್ಯ ಪೆಟ್ರೋಲ್ ಬಂಕ್ ಬಳಿ ರಾಯಲ್ ಎನ್ ಫೀಲ್ಡ್ ಬೈಕ್ ನಲ್ಲಿ ಹಾವು ಸೇರಿಕೊಂಡಿತ್ತು. ಈ ವೇಳೆ  ಹಾವನ್ನು ಕಂಡು ಬೈಕ್ ಸವಾರ ಹೌಹಾರಿದ್ದು, ಕೂಡಲೇ ಉರಗ ರಕ್ಷಕ ಸೂರ್ಯ ಕೀರ್ತಿಗೆ ಸಾರ್ವಜನಿಕರು ಕರೆ ಮಾಡಿ ವಿಚಾರ ತಿಳಿಸಿದ್ದಾರೆ.

ಬಳಿಕ ಸ್ಥಳಕ್ಕಾಗಮಿಸಿದ ಸೂರ್ಯಕೀರ್ತಿ ಪೆಟ್ರೋಲ್ ಟ್ಯಾಂಕ್ ನ ಕೆಳಗೆ ಅಡಗಿದ್ದ ಹಾವನ್ನು ಸುರಕ್ಷಿತವಾಗಿ ರಕ್ಷಿಸಿದರು. ರಕ್ಷಣೆ ಮಾಡಿದ ಹಾವು ಆಭರಣದ ಹಾವಾಗಿದ್ದು, ಹೆಚ್ಚು ವಿಷಕಾರಿಯಲ್ಲ ಎಂದು ಸೂರ್ಯ ಕೀರ್ತಿ ತಿಳಿಸಿದರು.

ತಂದೆಯಿಂದಲೇ ಹಾವುಗಳ ರಕ್ಷಣೆ ಮಾಡುವುದನ್ನು ಕರಗತ ಮಾಡಿಕೊಂಡಿರುವ ಸೂರ್ಯ ಕೀರ್ತಿ ಕೂಡ ಇದೀಗ ಜನವಸತಿ ಪ್ರದೇಶಗಳತ್ತ ಬರುವ ಹಾವುಗಳನ್ನು ರಕ್ಷಣೆ ಮಾಡಿ ಸುರಕ್ಷಿತ ಪ್ರದೇಶಗಳಲ್ಲಿ ಬಿಡುವುದರಲ್ಲಿ ಪರಿಣಿತರಾಗಿದ್ದಾರೆ.

Key words: mysore- rescued- snake- hiding – bike- Snake Sham- Son