ಮೈಸೂರು ರಂಗಾಯಣದಿಂದ ‘ಕೋವಿಡ್ ಕತ್ತಲೆಯಲ್ಲೂ ರಂಗಬೆಳಕು’ ಪರಿಚಯ ಪುಸ್ತಕ ಬಿಡುಗಡೆ…

ಮೈಸೂರು,ಡಿಸೆಂಬರ್,31,2020(www.justkannada.in):  ಪುಸ್ತಕ ಬಿಡುಗಡೆಯಲ್ಲೂ ರಂಗಾಯಣದ ಕ್ರಿಯಾಶೀಲತೆ  ತೋರಿದ್ದು, ಕೋವಿಡ್ ಪರಿಸ್ಥಿತಿ ನೆನಪಿಸುವಂತಹ ವೇದಿಕೆ ಸೃಷ್ಟಿಸಿ ಪುಸ್ತಕ ಬಿಡುಗಡೆವನ್ನ ಬಿಡುಗಡೆ ಮಾಡಿದೆ.jk-logo-justkannada-mysore

ಕೋವಿಡ್ ಸಂದರ್ಭದಲ್ಲಿ ರಂಗಾಯಣದ ರಂಗಚಟುವಟಿಕೆಗಳ ಕುರಿತಾದ ‘ಕೋವಿಡ್ ಕತ್ತಲೆಯಲ್ಲೂ ರಂಗಬೆಳಕು’ ಪರಿಚಯ ಪುಸ್ತಕವನ್ನ ಹೊರತಂದಿದ್ದು ಈ ಪುಸ್ತಕವನ್ನ ಇಂದು  ಶಾಸಕ ಎಲ್. ನಾಗೇಂದ್ರ ಬಿಡುಗಡೆ ಮಾಡಿದರು.  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಹಿರಿಯ ಕಲಾ ನಿರ್ದೇಶಕ ಶಶಿಧರ ಅಡಪ ಭಾಗಿಯಾಗಿದ್ದರು.

ಇನ್ನು ಕಾರ್ಯಕ್ರಮದಲ್ಲಿ ಪ್ರೇಕ್ಷಕರನ್ನು ರಾಗ ಪ್ರಾತ್ಯಕ್ಷಿತೆಗಳಿಂದ ಭಾರತೀಯ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ರಂಜಿಸಿದರು. ಮೈಸೂರು ರಂಗಾಯಣ ಕೋವಿಡ್ ಸಂದರ್ಭದಲ್ಲೂ ಸಕ್ರಿಯವಾಗಿ ರಂಗಚಟುವಟಿಕೆಗಳಲ್ಲಿ ತೊಡಗಿಕೊಂಡಿತ್ತು.mysore-rangayana-released-book-covid-kattaleyalu-ranga-belaku

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ, ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Key words: Mysore- Rangayana- released-‘book- covid kattaleyalu ranga belaku