Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Cinema ಮೈಸೂರಿನ ಶಕ್ತಿಧಾಮ ಆವರಣದಲ್ಲಿ ಪುನೀತ್ ಸ್ಮಾರಕವಾಗಲಿ.

ಮೈಸೂರಿನ ಶಕ್ತಿಧಾಮ ಆವರಣದಲ್ಲಿ ಪುನೀತ್ ಸ್ಮಾರಕವಾಗಲಿ.

 

ಮೈಸೂರು, ನ.16, 2021 : (www.justkannada.in news) ‘ಯುವರತ್ನ ‘ ಪುನೀತ್ ರಾಜಕುಮಾರ್ ರವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಘೋಷಿಸಿರುವುದು,  ಅವರ ಪ್ರತಿಭೆ, ಅಭಿನಯಕ್ಕೆ,  ನಿಸ್ವಾರ್ಥ ಸಮಾಜ ಸೇವೆಗೆ ಈ ಪ್ರಶಸ್ತಿ ಬಂಗಾರದ ಕಳಶದ ತರ ಮೆರುಗು ತಂದಿದೆ ಎಂದು ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್ ಸಂತಸ ವ್ಯಕ್ತಪಡಿಸಿದ್ದಾರೆ.

ಜತೆಗೆ, ಎಲ್ಲಾ ಅಭಿಮಾನಿಗಳ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಸಂಪುಟದ ಸಚಿವರಿಗೆ ಅನಂತಾನಂತ ಧನ್ಯವಾದ ಹೇಳಿದ್ದು, ಪುನೀತ್ ರಾಜಕುಮಾರ್ ರವರ ಸ್ಮಾರಕ ನಿರ್ಮಾಣ ಪ್ರಸ್ತಾವನೆ ಹಿನ್ನಲೆಯಲ್ಲಿ ಮೈಸೂರಿನ ಊಟಿ ರಸ್ತೆಯಲ್ಲಿರುವ ಶಕ್ತಿಧಾಮದಲ್ಲೇ ನಿರ್ಮಿಸಿದರೇ, ಪುನೀತ್ ರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಜತೆಗೆ ಪಠ್ಯಪುಸ್ತಕದಲ್ಲಿ ಪುನೀತ್ ರಾಜಕುಮಾರ್ ರವರ ನಟನೆ ಮತ್ತು ಸಮಾಜಸೇವೆಯ ಕುರಿತು ಮುದ್ರಿಸಬೇಕೆಂದು ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

key words : mysore-puneeth-rajkumar-memorial-shakthi-dhama