ಮೈಸೂರು,ಅಕ್ಟೋಬರ್,27,2025 (www.justkannada.in): ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ (IIET), ಮೈಸೂರು “ಪ್ರಾಜೆಕ್ಟ್ ವೆಸ್ಟ್ – ಸೃಜನಾತ್ಮಕ ಮರುಬಳಕೆ” ಎಂಬ ಸೃಜನಾತ್ಮಕ ಮತ್ತು ಪರಿಸರಸ್ನೇಹಿ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.
ನವೆಂಬರ್ 1 ಮತ್ತು 2ರಂದು ನಡೆಯುವ ಈ ಕಾರ್ಯಾಗಾರವು “ತ್ಯಾಜ್ಯ ಬಟ್ಟೆಗಳಿಂದ ಸೃಜನಾತ್ಮಕ ಮರುಬಳಕೆ” ಎಂಬ ವಿಶೇಷ ವಿಷಯದಡಿ ಆಯೋಜನೆಗೊಳ್ಳುತ್ತಿದ್ದು 7ರಿಂದ 14 ವರ್ಷದ ಮಕ್ಕಳಿಗೆ ಈ ಕಾರ್ಯಾಗಾರ ಭಾಗವಹಿಸಬಹುದಾಗಿದೆ.
ಸ್ಥಳ: ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ (IIET), ಹಾರ್ಡ್ವಿಕ್ ಶಾಲಾ ಆವರಣ, ಜೆ.ಎಲ್.ಬಿ. ರಸ್ತೆ, ಮೈಸೂರು ಇಲ್ಲಿ ಕಾರ್ಯಗಾರ ಆಯೋಜಿಸಲಾಗಿದ್ದು ನವೆಂಬರ್ 1 ಶನಿವಾರ ಮಧ್ಯಾಹ್ನ 3.00ರಿಂದ 5.00ರವರೆಗೆ ಮತ್ತು ನವೆಂಬರ್ 2 ಭಾನುವಾರ ಬೆಳಗ್ಗೆ 10.00ರಿಂದ ಮಧ್ಯಾಹ್ನ 12.00ರವರೆಗೆ ಕಾರ್ಯಗಾರ ನಡೆಯಲಿದೆ.
ಪ್ರತಿ ವಾರಾಂತ್ಯದ ಭಾಗವಹಿಸುವಿಕೆ ಶುಲ್ಕ ₹200. ಈ ಕಾರ್ಯಾಗಾರದ ಮೂಲಕ ಮಕ್ಕಳು ಪರಿಸರ ಸಂರಕ್ಷಣೆ, ಮರುಬಳಕೆ ಹಾಗೂ ಕಲಾತ್ಮಕ ಚಿಂತನೆಯ ಮಹತ್ವವನ್ನು ಅರಿತುಕೊಳ್ಳುವ ಅವಕಾಶ ಪಡೆಯುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಮತ್ತು ನೋಂದಣಿಗೆ ಸಂಪರ್ಕಿಸಿ: 98456 05012.
ಈ ಯೋಜನೆಯ ಉದ್ದೇಶ, ಮಕ್ಕಳಲ್ಲಿ ತ್ಯಾಜ್ಯ ವಸ್ತುಗಳ ಬಗ್ಗೆ ಹೊಸ ದೃಷ್ಟಿಕೋನವನ್ನು ಬೆಳೆಸುವುದು ಮತ್ತು ಅವುಗಳನ್ನು ಕಲಾತ್ಮಕ ರೂಪದಲ್ಲಿ ಪರಿವರ್ತಿಸಲು ಪ್ರೇರೇಪಿಸುವುದಾಗಿದೆ. ಈ ಕಾರ್ಯಕ್ರಮದಲ್ಲಿ ಮಕ್ಕಳು ತಮ್ಮ ಸೃಜನಾತ್ಮಕತೆಯಿಂದ ಹಳೆಯ ಬಟ್ಟೆಗಳನ್ನು ಹೊಸ ರೂಪದಲ್ಲಿ ಕಲಾಕೃತಿಗಳಾಗಿ ರೂಪಿಸುವುದನ್ನು ಕಲಿಯುತ್ತಾರೆ.
Key words: Mysore, ‘Project, West – Creative Recycling, workshop







