ಮೈಸೂರಿನಲ್ಲಿ ಪ್ರೊ. ಭಗವಾನ್ ಮನೆ ಮುತ್ತಿಗೆಗೆ ಯತ್ನ: ಪೊಲೀಸ್ ಬಿಗಿ ಭದ್ರತೆ.

ಮೈಸೂರು,ಅಕ್ಟೋಬರ್,14,2023(www.justkannada.in): ಒಕ್ಕಲಿಗರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಇಂದು ಮೈಸೂರಿನಲ್ಲಿನ ಪ್ರಗತಿಪರ ಚಿಂತಕ ಪ್ರೊ.ಭಗವಾನ್ ನಿವಾಸಕ್ಕೆ  ಮೈಸೂರು ಚಾಮರಾಜ ಒಕ್ಕಲಿಗರ ಸಂಘದಿಂದ ಮುತ್ತಿಗೆಗೆ ಯತ್ನಿಸಲಾಯಿತು.

ನಿನ್ನೆ ನಡೆದ ಮಹಿಷಾ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರೊ. ಭಗವಾನ್ ‘ಒಕ್ಕಲಿಗರು ಸಂಸ್ಕೃತಿ ಹೀನರು ಅಂತಾ ಕುವೆಂಪು ಹೇಳಿದ್ದರು’ ‘ಅದನ್ನು ನಾನು ಹೇಳಿದರೆ ಹೊಡೆಯುತ್ತಾರೆ’ ಎಂದು  ಹೇಳಿಕೆ ನೀಡಿದ್ದರು.

ಪ್ರೊ.ಭಗವಾನ್ ಹೇಳಿಕೆಯಿಂದ ಆಕ್ರೋಶಗೊಂಡ  ಮೈಸೂರು ಚಾಮರಾಜ ಒಕ್ಕಲಿಗರ ಸಂಘದಿಂದ ಮೈಸೂರಿನ ಕುವೆಂಪು ನಗರದಲ್ಲಿರುವ ಪ್ರೊ.ಭಗವಾನ್ ಮನೆ ಮುತ್ತಿಗೆಗೆ ಕರೆ ನೀಡಿತ್ತು. ಅಂತೆಯೇ ಇಂದು ಪ್ರೊ.ಭಗವಾನ್ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದು, ಪೊಲೀಸರು ತಡೆದಿದ್ದಾರೆ. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದ್ದು ರಸ್ತೆಯಲ್ಲೇ ಕುಳಿತು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ. ಇನ್ನು ಪ್ರೊ.ಭಗವಾನ್ ನಿವಾಸಕ್ಕೆ ಪೊಲೀಸ್ ಬಿಗಿ ಭದ್ರತೆ ವಹಿಸಲಾಗಿದೆ.

Key words: Mysore-Prof.Bhagwan –house- Police –tight- security