Wednesday, October 7, 2026

BDA Apartments

immense respect BDA JK_Adv BDA Adv
Home Crime CONSTABLE SUICIDE : ವಾಟ್ಸ್ ಅಪ್ ಡಿಪಿಲೀ ಡೆತ್ ನೋಟ್ ಪೋಸ್ಟ್,...

CONSTABLE SUICIDE : ವಾಟ್ಸ್ ಅಪ್ ಡಿಪಿಲೀ ಡೆತ್ ನೋಟ್ ಪೋಸ್ಟ್, ಬಳಿಕ ಆತ್ಮಹತ್ಯೆಗೆ ಶರಣಾದ ಕಾನ್ಸ್ಟೆಬಲ್ .

 

ಮೈಸೂರು, ಅ.12, 2021 : (www.justkannada.in news) ಕೌಟುಂಬಿಕ ಕಲಹದಿಂದ ಬೇಸತ್ತ ಅಬಕಾರಿ ಕಾನ್ಸ್ಟೆಬಲ್ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ನಂಜನಗೂಡು ತಾಲ್ಲೂಕು ಗೊದ್ದನಪುರದಹುಂಡಿ ಸಮೀಪದ ರಾಂಪುರ ನಾಲೆಗೆ ಹಾರಿ. ಸರ್ಕಾರಿ ಉತ್ತನಹಳ್ಳಿಯ (ಏಳಿಗೆ ಹುಂಡಿ) ನಿವಾಸಿ ಮಹೇಶ್‌ (34) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಮಹೇಶ್, ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿನ ಯುಬಿ ಎಕ್ಸ್‌ಪೋರ್ಟ್‌ ಕಾರ್ಖಾನೆಯಲ್ಲಿ ಅಬಕಾರಿ ಇಲಾಖೆಯಿಂದ ಮೇಲ್ವಿಚಾರಣ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆತ್ಮಹತ್ಯೆಗೂ ಮುನ್ನ ಬರೆದಿದ್ದ ಡೆತ್‌ನೋಟ್‌ ಅನ್ನು ವಾಟ್ಸಪ್‌ ಡಿಪಿಯಲ್ಲಿ ಪ್ರಕಟಿಸಿ ಬಳಿಕ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ರಾತ್ರಿ ೯.30 ಸಮಯದಲ್ಲಿ ರಾಂಪುರ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಬೆಳಗಿನ ಜಾವ 3.30ರ ಸಮಯದಲ್ಲಿ ಶವ ಪತ್ತೆ.

ಈ ಸಂಬಂಧ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡೆತ್ ನೋಟ್ ವಿವರ ಹೀಗಿದೆ :

ಮೃತ ಮಹೇಶ್ ರ ಡೆತ್‌ನೋಟ್‌ನಲ್ಲಿ ನನ್ನ ಸಾವಿಗೆ ಹೆಂಡತಿ ಕೆ.ಡಿ. ಲಕ್ಷ್ಮಿ ಮತ್ತು ಅವರ ತಾಯಿ ಭಾರತಿ, ದೇವರಾಜು, ಹೆಂಡತಿಯ ಚಿಕ್ಕಪ್ಪ ಮಲ್ಲೇಶ್‌ ಹಾಗೂ ಆತನ ಹೆಂಡತಿ ರೇಖಾ ಹಾಗೂ ನನಗೆ ಹುಡುಗಿ ತೋರಿಸಿದ ಬ್ರೋಕರ್‌ ಸಿದ್ದಪ್ಪ ಹಾಗೂ ಆತನ ಇಬ್ಬರು ಮಕ್ಕಳು ಕಾರಣ.
ನನ್ನ ಸಾವನ್ನು ತಡೆದುಕೊಳ್ಳುವ ಶಕ್ತಿಯನ್ನು ನನ್ನ ಅಪ್ಪ-ಅಮ್ಮನಿಗೆ ಭಗವಂತ ನೀಡಲಿ. ನಾನು ಯಾವ ತಪ್ಪನ್ನೂ ಮಾಡಿಲ್ಲ. ನಮ್ಮ ಕುಟುಂಬದರೊಂದಿಗೆ ಬಾಳುವ ಶಕ್ತಿಯನ್ನು ದೇವರು ನೀಡಲಿಲ್ಲ. ನನ್ನ ಸಾವಿನಿಂದ ಕೆಲವರಿಗೆ ಎರಡು ನಿಮಿಷ ಸಂತೋಷ ನೀಡಬಹುದು. ಐ ಮಿಸ್‌ಯು ರಾಜ, ಸಾರಿ ತಮ್ಮ, ನನ್ನ ನೆಚ್ಚಿನ ಮುದ್ದಿನ ತಮ್ಮನ್ನು ಕಾಪಾಡಿ. ಎಲ್ಲ ಜವಾಬ್ದಾರಿಗಳನ್ನು ನಿನಗೆ ವಹಿಸಿ ಹೋಗುತ್ತಿದ್ದೇನೆ. ಎಲ್ಲರೂ ನನ್ನನ್ನು ಕ್ಷಮಿಸಿಬಿಡಿ.
ಇಂತಿ ನಿಮ್ಮ
ಮಹೇಶ್‌ ಸಿ

key words : Mysore-police-excise-constable-suicide-family-dispute-nanjangudu