ಇತಿಹಾಸ ಪುಟ ಸೇರಿದ ಮೈಸೂರಿನ ಎನ್‌ ಟಿಎಂಎಸ್ ಶಾಲೆ.

ಮೈಸೂರು,ಫೆಬ್ರವರಿ,8,2022(www.justkannada.in): ಮೈಸೂರಿನಲ್ಲಿ ವಿವೇಕ ಸ್ಮಾರಕ ಸ್ಥಳ ವಿವಾದ ಪ್ರಕರಣ ಸಂಬಂಧ ಕಡೆಗೂ ವಿವಾದಿತ ಸ್ಥಳ ಎನ್‌ಟಿಎಂಎಸ್ ಶಾಲಾ ಕಟ್ಟಡವನ್ನ ಕೊನೆಗೂ ತೆರವುಗೊಳಿಸಲಾಗಿದ್ದು  ಈ ಮೂಲಕ ಕರ್ನಾಟಕ ಮೊದಲ ಮಹಿಳಾ ಕನ್ನಡ ಶಾಲೆ ಎಂದು ಹೆಸರು ಗಳಿಸಿದ್ಧ  ಎನ್‌ಟಿಎಂಎಸ್ ಶಾಲೆ ಇತಿಹಾಸದ ಪುಟ ಸೇರಿದೆ.

ನೂರಾರು ಪೊಲೀಸರ ಸಮ್ಮುಖದಲ್ಲಿ ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಈ ಶಾಲಾ ಕಟ್ಟಡ ತೆರವು ಕಾರ್ಯಾಚರಣೆ ನಡೆಯಿತು ಭದ್ರತೆಗಾಗಿ 250ಕ್ಕೂ ಹೆಚ್ಚು ಪೊಲೀಸರು ನಿಯೋಜನೆ ಮಾಡಲಾಗಿದ್ದು, ಡಿಸಿಪಿ ಗೀತಾ ಪ್ರಸನ್ನ, ಎಸಿಪಿ ಶಶಿಧರ್, 5 ಸರ್ಕಲ್‌ ಇನ್ಸ್‌ಪೆಕ್ಟರ್ ಸೇರಿ 250 ಪೊಲೀಸರ ನಿಯೋಜನೆ ಮಾಡಲಾಗಿತ್ತು . 4 ಹಿಟಾಚಿ, 3 ಜೆಸಿಬಿಗಳಿಂದ ಕಟ್ಟಡ ಬಳಸಿ ಶಾಲಾ ಕಟ್ಟಡ ತೆರವುಗೊಳಿಸಲಾಗಿದ್ದು, ಕಾರ್ಯಾಚರಣೆ ತಡೆಯಲು ಬಂದ ಎನ್‌ಟಿಎಂ ಶಾಲೆ ಉಳಿಸಿ ಹೋರಾಟ ಸಮಿತಿ ಸದಸ್ಯರನ್ನ‌ ಬಂಧಿಸಲಾಯಿತು.

ಜಾಗ ನೀಡಲು ಹಲವರು ನಿರಾಕರಣೆ ಮಾಡಿದ ಹಿನ್ನೆಲೆ, ಹೈಕೋರ್ಟ್ ಆದೇಶ ತಂದು ಸರ್ಕಾರ ಜಾಗ ತೆರವು ಮಾಡಿದ್ದು, ಈಗಾಗಲೇ ಜಿಲ್ಲಾಧಿಕಾರಿಗಳು ರಾಮಕೃಷ್ಣ ಆಶ್ರಮಕ್ಕೆ ಜಾಗ ಹಸ್ತಾಂತರ ಮಾಡಿದ್ದಾರೆ. ವಿವೇಕಾನಂದರ 150ನೇ ಜಯಂತಿ ಹಿನ್ನೆಲೆ, ಅದರ ಸವಿ ನೆನಪಿಗಾಗಿ ಸ್ಮಾರಕ ನಿರ್ಮಾಣ ಮಾಡಲು ಸರ್ಕಾರ ಈ ಜಾಗವನ್ನ ಮೀಸಲಿಟ್ಟಿದೆ.  ಈ ಹಿಂದಿನ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆ ಇದಾಗಿದೆ.

Key words: mysore-NTMS School- Clearance