ನಂಜುಂಡನ ಸನ್ನಿಧಿಯಲ್ಲಿ ಪಾರ್ಕಿಂಗ್ ಶುಲ್ಕ ಡಬ್ಬಲ್ : ಗುತ್ತಿಗೆದಾರನ ವಿರುದ್ಧ ದೂರು.

Mysore-nanjanagudu-vehicle-parking-fee-double-raise-complaint-temple

 

ನಂಜನಗೂಡು, ಜ.16, 2022 : (www.justkannada.in news ) ಪಟ್ಟಣದ ಶ್ರೀಕಂಠೇಶ್ವರ ದೇವಾಲಯದಲ್ಲಿ ವಾಹನ ನಿಲುಗಡೆ ಶುಲ್ಕವನ್ನು ನಿಗದಿಗೊಳಿಸಿದ ದರಕ್ಕಿಂತ ದುಪ್ಪಟ್ಟು ವಸೂಲು ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಈ ಸಂಬಂಧ ಆರ್.ಸಂಜಯ್ ಎಂಬುವರು ದೇವಾಲಯದ ಅಧಿಕಾರಿಗಳಿಗೆ ದೂರು ನೀಡಿದ್ದು, ಸರಕಾರ ನಿಗಧಿಪಡಿಸಿದ ಮೊತ್ತಕ್ಕಿಂತ ಹೆಚ್ಚುವರಿ ಹಣವನ್ನು ಭಕ್ತರಿಂದ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ದೂರುದಾರರು ನೀಡಿರುವ ಮಾಹಿತಿಯಂತೆ, ‘ಬಸ್, ಲಾರಿಗಳಿಗೆ ನಿಗದಿತ ರೂ. 50 ಕ್ಕೆ ಬದಲಾಗಿ 100 ರೂ. ಟೆಂಪೋ, ಮಿನಿ ಬಸ್‌ಗಳಿಗೆ 35 ರೂ. ಬದಲು 60 ರೂ, ಕಾರ್ ಮತ್ತು ಜೀಪ್ ಗಳಿಗೆ 25 ರೂ. ಗೆ ಬದಲು 50 ರೂ. ಅನ್ನು ಗುತ್ತಿಗೆದಾರರು ವಸೂಲು ಮಾಡುತ್ತಿದ್ದಾರೆ ಎನ್ನಲಾಗಿದೆ.

ಈ ದೂರಿನ ಅನ್ವಯ ದೇವಾಲಯದ ಎಇಒ, ಗುತ್ತಿಗೆದಾರರಿಗೆ ನಿಗದಿತ ದರಕ್ಕಿಂತ ಹೆಚ್ಚು ಹಣವನ್ನು ಭಕ್ತಾಧಿಗಳಿಂದ ವಸೂಲಿ ಮಾಡದಂತೆ ಎಚ್ಚರಿಕೆ ನೀಡಿ, ನೋಟಿಸ್ ಜಾರಿ ಮಾಡಿದ್ದಾರೆ.

key words : Mysore-nanjanagudu-vehicle-parking-fee-double-raise-complaint-temple