ನಂಜನಗೂಡು ರಥೋತ್ಸವ ರದ್ಧು ಆದೇಶ ಪುನರ್ ಪರಿಶೀಲಿಸುವಂತೆ ಜಿಲ್ಲಾಧಿಕಾರಿಗೆ ಮನವಿ…

ಮೈಸೂರು,ಮಾರ್ಚ್,17,2021(www.justkannada.in):  ಕೊರೋನಾ ಹಿನ್ನೆಲೆಯಲ್ಲಿ ನಂಜನಗೂಡು ಶ್ರೀಕಂಠೇಶ್ವರ  ರಥೋತ್ಸವ ರದ್ದು ಮಾಡಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ.jk

ಈ ಮಧ್ಯೆ ಈ ಆದೇಶ ಪುನರ್ ಪರಿಶೀಲನೆ ಮಾಡುವಂತೆ ಡಿಸಿ ರೋಹಿಣಿ ಸಿಂಧೂರಿ ಅವರಿಗೆ ಶ್ರೀಕಂಠೇಶ್ವರ ಭಕ್ತ ಮಂಡಳಿ ಮನವಿ ಸಲ್ಲಿಸಿದೆ. ನಂಜನಗೂಡು ರಥೋತ್ಸವನ್ನು ಸ್ಥಳೀಯರೇ ಆಚರಿಸಿಕೊಳ್ಳುವುದಕ್ಕಾದರೂ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. mysore- najnagudu-rathotsava-cancel –order- reconsideration.

ಕೋವಿಡ್-19 ನಿಯಮಾನುಸಾರವೇ ರಥೋತ್ಸವ ನಡೆಸುತ್ತೇವೆ. ಎಲ್ಲಾ ಜಾತ್ರೆಗಳಿಗೂ ಅನುಮತಿ ನೀಡಿ ನಂಜನಗೂಡು ಜಾತ್ರೆಗೆ ಅನುಮತಿ ನೀಡದಿರುವುದು ಸರಿಯಲ್ಲ. ಜಿಲ್ಲಾಧಿಕಾರಿಗಳು ಆದೇಶವನ್ನು ಪುನರ್ ಪರಿಶೀಲಿಸುವಂತೆ ಭಕ್ತ ಮಂಡಳಿ ಸದಸ್ಯರು ಕೋರಿದ್ದಾರೆ.

ಒಂದು ವೇಳೆ ರಥೋತ್ಸವಕ್ಕೆ ಅನುಮತಿ ನೀಡದೇ ಇದ್ದರೆ ಮುಂದಿನ ನಡೆ ಬಗ್ಗೆ ಸ್ಥಳೀಯರು ಹಾಗೂ ಭಕ್ತರ ಜೊತೆ ಚರ್ಚೆ ಬಳಿಕ ನಿರ್ಧಾರ ಮಾಡಲಾಗುತ್ತದೆ ಎಂದಿದ್ದಾರೆ.

Key words: mysore- najnagudu-rathotsava-cancel –order- reconsideration.