ಮೈಸೂರು: ಯುವಕನ ಬರ್ಬರ ಹತ್ಯೆ

ಮೈಸೂರು, ಜನವರಿ, 20,2026 (www.justkannada.in):  ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

26 ವರ್ಷದ ಎಂ. ಡಿ. ಶಹಬಾಜ್  ಕೊಲೆಯಾದ ಯುವಕ. ನಗರದ ಬೀಡಿ ಕಾಲೋನಿಯಲ್ಲಿ ಶಹಬಾಜ್ ನನ್ನು ಇಂದು ಬೆಳಗಿನ ಜಾವ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಫ್ಯಾಬ್ರಿಕರ್ ಆಗಿದ್ದು ಗೌಸಿಯಾ ನಗರದ ನಿವಾಸಿ ಎಂದು ತಿಳಿದು ಬಂದಿದೆ. ಜುಬೇರ್ ಮತ್ತು ಇತರರು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಪ್ರಾಥಮಿಕ ತನಿಖೆಯಲ್ಲಿ ಇದು ಆಟೋ ಫೇರ್ ಸಂಗ್ರಹಿಸುವ ಹಾಗೂ ಇನ್ನಿತರ ವಿಚಾರದಿಂದ ನಡೆದಿರುವ ಕೊಲೆ‌ ಎಂದು ತಿಳಿದು ಬಂದಿದೆ. ತನಿಖೆಯ ನಂತರ ನಿಖರ ಕಾರಣ ತಿಳಿದು ಬರಲಿದೆ. ಆರೋಪಿಗಳ ಪತ್ತೆಗೆ ತಂಡವನ್ನು ರಚಿಸಲಾಗಿದೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ನಂತರ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

Key words: Mysore, Brutal, murder, young man