ಬಾವನಿಂದ ಬಾಮೈದುನನ ಹತ್ಯೆ ಕೇಸ್: ನಾಲ್ವರು ಆರೋಪಿಗಳ ಬಂಧನ.  

ಮೈಸೂರು,ಜೂನ್,10,2024 (www.justkannada.in): ವರದಕ್ಷಿಣೆ ಕಿರುಕುಳ ಸಂಬಂಧ ಬಾವನಿಂದ  ಬಾಮೈದುನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ತಲೆ ಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನ ಕುವೆಂಪು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ರವಿಚಂದ್ರ  ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯ ಸಹೋದರ ಕುಮಾರ್, ತಾಯಿ ಶಾರದಾ, ಪದ್ಮ, ಕಾರ್ತಿಕ್ ಎಂಬವರನ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಬೆಂಗಳೂರಿನಲ್ಲಿ  ತಲೆಮರೆಸಿಕೊಂಡಿದ್ದರು. ಖಚಿತ ಮಾಹಿತಿ ಪಡೆದ ಪೊಲೀಸರು ಬೆಂಗಳೂರಿಗೆ ತೆರಳಿ  ಬಂಧಿಸಿದ್ದಾರೆ.

ಆರೋಪಿ ರವಿಚಂದ್ರ ತನ್ನ ಬಾಮೈದ  ಅಭಿಷೇಕ್‌ ‌ನನ್ನು ಶನಿವಾರ ಚಾಕುವಿನಿಂದ  ಇರಿದು ಕೊಲೆ ಮಾಡಿದ್ದ. ಅಭಿಷೇಕ್‌ನೊಂದಿಗೆ ತೆರಳಿದ್ದ ಸ್ನೇಹಿತ ಗೌತಮ್ ಮೇಲೂ ಹಲ್ಲೆ ಮಾಡಿದ್ದ.  ನಿವಾಸದಲ್ಲಿ ವರದಕ್ಷಿಣೆ ವಿಚಾರವಾಗಿ ಗಲಾಟೆ ನಡೆದಿತ್ತು.  ಪೊಲೀಸರು ಕೂಡ ಬಂದು ಬುದ್ದಿವಾದ ಹೇಳಿದ್ದರು.  ಆದರೆ ಮತ್ತೆ ಮಧ್ಯಾಹ್ನ ರವಿಚಂದ್ರ ಹಾಗೂ ಪತಿ ವಿದ್ಯಾ ನಡುವೆ ಗಲಾಟೆ ನಡೆದಿದ್ದು, ವಿಚಾರ ತಿಳಿದ ಅಭಿಷೇಕ್ ಸ್ನೇಹಿತನೊಂದಿಗೆ ಸ್ಥಳಕ್ಕೆ ಬಂದಿದ್ದರು. ಆಗ ರವಿಚಂದ್ರ ಹಾಗೂ ಅಭಿಷೇಕ್ ನಡುವೆ ಗಲಾಟೆ ನಡೆದಿದೆ.  ಈ ವೇಳೆ ಅಭಿಷೇಕ್ ಎದೆಗೆ ರವಿಚಂದ್ರ ಚಾಕುವಿನಿಂದ ಇರಿದು ಪರಾರಿಯಾಗಿದ್ದನು.

ಈ ಕುರಿತು ಕುವೆಂಪು ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪ್ರಕರಣ ಆರೋಪಿಗಳೆಲ್ಲರನ್ನ ಪೋಲಿಸರು ವಶಕ್ಕೆ ಪಡೆದಿದ್ದಾರೆ.

Key words: Mysore, murder, case, five, Arrest