ಚಾಕು ಇರಿದು ಸ್ನೇಹಿತನನ್ನೇ ಹತ್ಯೆಗೈದಿದ್ದ ಐವರು ಆರೆಸ್ಟ್

ಮೈಸೂರು,ಜುಲೈ,19,2025 (www.justkannada.in): ಬರ್ತ್ ಡೇ ಸೆಲೆಬ್ರೇಷನ್ ಗೆ ಕರೆಸಿಕೊಂಡು ತನ್ನ ಸ್ನೇಹಿತನಿಗೆ ಚಾಕು ಇರಿದು ಹತ್ಯೆ ಮಾಡಿದ್ದ ಐವರನ್ನು ನಂಜನಗೂಡು ಗ್ರಾಮಾಂತರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ವಸಂತ, ಮಧು, ಅಭಿ, ಸಿದ್ದರಾಜು, ರವಿಚಂದ್ರ ಬಂಧಿತ ಆರೋಪಿಗಳು. ನಿನ್ನೆ ಬರ್ತ್ ಡೇ ಸೆಲೆಬ್ರೇಷನ್ ಗೆ ಕಿರಣ್ ಎಂಬ ಯುವಕನನ್ನು ಕರೆಸಿಕೊಂಡು ಸ್ನೇಹಿತರೇ ಹತ್ಯೆ ಮಾಡಿದ್ದರು. ಹತ್ಯೆ ಬಳಿಕ ಐವರು ನಾಪತ್ತೆಯಾಗಿದ್ದರು. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ಕೆಂಪಿಸಿದ್ದನಹುಂಡಿ‌ ಗ್ರಾಮದಲ್ಲಿ ಘಟನೆ ನಡೆದಿತ್ತು.

ಕಿರಣ್

ರವಿಚಂದ್ರ ಎಂಬವನ ಬರ್ತ್ ಡೇಗೆ ಕರೆಸಿಕೊಂಡು ಯುವತಿ ವಿಚಾರಕ್ಕೆ ಸಂಬಂಧಿಸಿದಂತೆ ಕಿರಣ್ ಗೆ  ಮನಸೋ ಇಚ್ಛೆ ಥಳಿಸಿ, ಚಾಕು‌ ಇರಿದು ಸ್ನೇಹಿತರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಗಂಭೀರ ಗಾಯಗೊಂಡಿದ್ದ ಕಿರಣ್ ನನ್ನು  ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಕಿರಣ್ ಸಾವನ್ನಪ್ಪಿದ್ದನು. ಇದೀಗ ಐವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.vtu

Key words: Mysore, Five, arrested, stabbing, friend, death