ನೆರೆ ಪರಿಹಾರದ ಬಗ್ಗೆ ಮಾತನಾಡದ ಪ್ರಧಾನಿ ಮೋದಿ ನಡೆ ಬಗ್ಗೆ ಟೀಕಿಸಿದ ಕಾಂಗ್ರೆಸ್ ಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದು ಹೀಗೆ..?

ಬೆಂಗಳೂರು,ಜ,3,2019(www.justkannada.in): ತುಮಕೂರಿನ ರೈತ ಸಮಾವೇಶದಲ್ಲಿ ವೇದಿಕೆಯಲ್ಲೇ ಸಿಎಂ ಬಿಎಸ್ ಯಡಿಯೂರಪ್ಪ ಪರಿಹಾರಕ್ಕೆ ಮನವಿ ಮಾಡಿದರೂ ಪರಿಹಾರದ ಬಗ್ಗೆ  ಭಾಷಣದ ವೇಳೆ  ಮಾತನಾಡದ ಪ್ರಧಾನಿ ಮೋದಿ ವಿರುದ್ದ ಟೀಕಿಸಿದ್ದ ಕಾಂಗ್ರೆಸ್ ನಾಯಕರಿಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ನಾಯಕರಿಂದ ನಾವು ಸರ್ಟಿಫಿಕೇಟ್ ಪಡೆಯಬೇಕಾಗಿಲ್ಲ. ಕಾಂಗ್ರೆಸ್ಸೆಗರಂತೆ ಸೋನಿಯಾ ಮುಂದೆ ಮಂಡಿಯೂರಿ ಮಾತನಾಡುವ ದಯನೀಯ ಸ್ಥಿತಿ ಬಿಜೆಪಿಯವರಿಗೆ ಬಂದಿಲ್ಲ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಕರ್ನಾಟದ ಜನ ನಮಗೆ 1998ರಿಂದ ಸಂಸದರ ಸಂಖ್ಯೆ ಹೆಚ್ಚಿಸುತ್ತಲೇ ಬಂದಿದ್ದಾರೆ. ಮೋದಿಯೂ ಯಾವಾಗಲು ರಾಜ್ಯದ ಪರ ಇದ್ದಾರೆ. ಕಾಂಗ್ರೆಸ್ ನಾಯಕರಿಂದ ಹೇಳಿಸಿಕೊಂಡು ನಾವು ಮೋದಿ ಜೊತೆ ಮಾತನಾಡಬೇಕಿಲ್ಲ ಎಂದು ತಿರುಗೇಟು ನೀಡಿದರು.

ಡಿ.ಕೆ.ಶಿವಕುಮಾರ್ ನೀವೂ ಏಸುಕುಮಾರ್ ಆಗಬೇಡಿ…

ಕಪಾಲಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ಕುರಿತು ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಡಿ.ಕೆ.ಶಿವಕುಮಾರ್ ನೀವೂ ಏಸುಕುಮಾರ್ ಆಗಬೇಡಿ. ಕಪಾಲಿ ಅಥವಾ  ಬೆಟ್ಟ ಅಂದ್ರೆ ಶಿವನ ಬೆಟ್ಟ. ಆ ಬೆಟ್ಟವನ್ನು ಏಸು ಬೆಟ್ಟ ಮಾಡಿ ನೀವು ಏಸುಕುಮಾರ ಅನಿಸಿಕೊಳ್ಳಬೇಡಿ. ಶಿವ ಮತ್ತು ಭಕ್ತರ ನಡುವಿನ ಸಂಬಂಧ ಇದು. ಆ ಸಂಬಂಧವನ್ನು ನೀವು ಮುರಿಯಬೇಡಿ ಎಂದು ಸಲಹೆ ನೀಡಿದರು.

ಸಿದ್ದಗಂಗಾ ಮಠದಲ್ಲಿ ಪ್ರಧಾನಿ ಭಾಷಣದ ಬಗ್ಗೆ ಕಾಂಗ್ರೆಸ್ ಟೀಕಿಸಿದ  ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ,  ಕಾಂಗ್ರೆಸ್ ಏಕೆ ಈ ಮಟ್ಟದ ಉರಿ ಅಂತ  ಗೊತ್ತಾಗುತ್ತಿಲ್ಲ. ಮಠಕ್ಕೆ ಹೋದ ಪ್ರಧಾನಿಯನ್ನ ಸಿದ್ದರಾಮಯ್ಯ ಟೀಕಿಸುತ್ತಾರೆ. ಪ್ರಧಾನಿ ವಿಭೂತಿಯನ್ನ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ವ್ಯಂಗ್ಯ ಮಾಡುತ್ತಾರೆ‌. ಕಾಲಭೈರವೇಶ್ವರ ಜಾಗದಲ್ಲಿ ಡಿಕೆಶಿ ಏಸು ಪ್ರತಿಮೆ ನಿರ್ಮಾಣ ಮಾಡ್ತಿನಿ ಅಂತಾರೆ. ಇದನ್ನ ನೋಡಿದ್ರೆ ಶಿವನ ಭಕ್ತರ ಬಗ್ಗೆ ಕಾಂಗ್ರೆಸ್ ಮತ್ಸರ ಉಂಟಾಗಿರಬೇಕು. ಯಾಕಾಗಿ ಇಷ್ಟು ಮತ್ಸರ, ಯಾಕೇ ಇಷ್ಟು ಉರಿ..? ದೇಶದ ಜಲ್ವಂತ ಸಮಸ್ಯೆ ಬಗ್ಗೆ ಭವಿಷ್ಯದ ಪ್ರಜೆಗಳಿಗೆ ಪ್ರಧಾನಿ ತಿಳುವಳಿಕೆ ಕೊಟ್ಟಿದ್ದರಲ್ಲಿ ತಪ್ಪೇನಿದೆ. ಯಾಕೇ ಇಷ್ಟು ಉರಿದುಕೊಂಡು ಟ್ವಿಟ್ ಮಾಡುತ್ತಿದ್ದೀರಿ ಎಂದು ಪ್ರಧಾನಿ ಮೋದಿ ಟೀಕಿಸಿದ ಕಾಂಗ್ರೆಸ್ಸೆಗಿರ ಕಾಲೆಳೆದರು.

Key words: mysore- MP- Prathap simha-  tong- congress-criticized- Prime Minister -Modi