ಇಬ್ಬರು ಸಚಿವರು ಮತ್ತು ಓರ್ವ ಜೆಡಿಎಸ್ ಶಾಸಕರನ್ನ ಹಾಡಿ ಹೊಗಳಿದ ಸಂಸದ ಪ್ರತಾಪ್‌ ಸಿಂಹ: ಮೈಸೂರು ಜಿಲ್ಲಾಧಿಕಾರಿ ಬಗ್ಗೆಯೂ ಶ್ಲಾಘನೆ…

ಮೈಸೂರು,ಫೆ,28,2020(www.justkannada.in):  ಮೈಸೂರಿನ ಅಭಿವೃದ್ಧಿಗೆ  ಸಚಿವ ವಿ.ಸೋಮಣ್ಣ ಮತ್ತು ಶಾಸಕ ಜಿ.ಟಿ ದೇವೇಗೌಡರು ಜೋಡೆತ್ತು. ಹೀಗೆ ಬಣ್ಣಿಸಿದ್ದು ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ…

ಹೌದು, ಇಂದು ಮೈಸೂರಿನ ಯಲಚನಹಳ್ಳಿಯಲ್ಲಿ ನಡೆಯುತ್ತಿದ್ದ ಕೆರೆಗೆ ನೀರು ತುಂಬಿಸುವ ವೇದಿಕೆ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ ಅವರು ಇಬ್ಬರು ಸಚಿವರು ಶಾಸಕರನ್ನ ಹೊಗಳಿದರು ಹಾಗೆಯೇ ಮೈಸೂರು ಜಿಲ್ಲಾಧಿಕಾರಿಗಳನ್ನೂ ಸಹ ಶ್ಲಾಘಿಸಿದರು.

ಸಚಿವ ಸೋಮಣ್ಣ ಶಾಸಕ  ಜಿ,ಟಿ ದೇವೇಗೌಡರು ಜೋಡೆತ್ತು ಇದ್ದಂತೆ, ಮೈಸೂರಿನ ಅಭಿವೃದ್ಧಿಗೆ ಜೋಡೆತ್ತು ಎಂದು ಪ್ರತಾಪ್‌ಸಿಂಹ ಬಣ್ಣಿಸಿದರು. ಹಾಗೆಯೇ  ಸಚಿವ ಮಾಧುಸ್ವಾಮಿರನ್ನ ಅದ್ಬುತ ಭಾಷಣಕಾರ ಎಂದು ಪ್ರಶಂಶಿಸಿದ ಪ್ರತಾಪ್ ಸಿಂಹ ಮೈಸೂರು ಜಿಲ್ಲಾಧಿಕಾರಿಯನ್ನ ರಾಜ್ಯದ ನಂ1 ಜಿಲ್ಲಾಧಿಕಾರಿ ಎಂದು ಶ್ಲಾಘಿಸಿದರು.

ನಾನು ಜಿ.ಟಿ.ದೇವೇಗೌಡರಿಗೆ ಮಗ ಇದ್ದಂತೆ…

ಇದೇ ವೇಳೆ ಮಾಜಿ ಸಚಿವ ಜಿ.ಟಿ ದೇವೇಗೌಡರನ್ನ ಗುಣಗಾನ ಮಾಡಿದ ಪ್ರತಾಪ್ ಸಿಂಹ, ನಾನು ಜಿ.ಟಿ.ದೇವೇಗೌಡರಿಗೆ ಮಗ ಇದ್ದಂತೆ. ಅವರು ಹರೀಶ್‌ಗೌಡನನ್ನ ಪ್ರೀತಿಸುವಂತೆ ನನ್ನನ್ನು‌ ನೋಡಿಕೋಳ್ತಾರೆ. ಅವರ ಆರ್ಶಿವಾದ ನನ್ನ ಮೇಲೆ ಇದ್ದೆ ಇರುತ್ತೆ. ಅವರಿಗೆ ನಾನು ಮಗ ಇದ್ದಂತೆ. ಅಭಿವೃದ್ಧಿ ವಿಚಾರದಲ್ಲಿ ನನ್ನನ್ನ ಸಂಸದ ಅಂತಾನು ನೋಡದೆ ಬೈತಾರೆ. ಅವರಿಗೆ ಬೇಕಾರೋದು ಅಭಿವೃದ್ಧಿ ಮಾತ್ರ. ಗರಬಡಿದವರಂತೆ ಅಭಿವೃದ್ಧಿಗಾಗಿ ಓಡಾಡ್ತಾರೆ. ಜಿಟಿಡಿಯಂತ ನಾಯಕರು ನಮಗೆ ಬೇಕಾಗಿದ್ದಾರೆ ಎಂದು ಹೇಳಿದರು. ಯೋಜನೆ ಬಗ್ಗೆ ತುಟಿ ಬಿಚ್ಚದ  ಸಂಸದ ಪ್ರತಾಪ್ ಸಿಂಹ ಅವರ ಇಂದಿನ ಭಾಷಣ ಕೇವಲ ಹೊಗಳಿಕೆಗೆ ಮೀಸಲಾಗಿತ್ತು.

Key words: mysore-MP-prathap simha- praised – two ministers – JDS MLA