ಏಷಿಯನ್ ಪೇಂಟ್ಸ್ ಕಾರ್ಖಾನೆ ಬಳಿ ಪ್ರತಿಭಟನಾನಿರತ ರೈತರ  ಮನವಿ ಆಲಿಸಿ ಭರವಸೆ ನೀಡಿದ ಸಂಸದ ಪ್ರತಾಪ್ ಸಿಂಹ…

ಮೈಸೂರು,ಜನವರಿ,4,2021(www.justkannada.in): ಏಷಿಯನ್ ಪೇಂಟ್ಸ್ ಕಾರ್ಖಾನೆ ಬಳಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಸಮಸ್ಯೆ ಆಲಿಸಿದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಸಮಸ್ಯೆ ಬಗೆಹರಿಸುವ ಭರವಸೆಯನ್ನ ನೀಡಿದರು.jk-logo-justkannada-mysore

ಪ್ರತಿಭಟನಾ ಸ್ಥಳಕ್ಕೆ  ಭೇಟಿ ನೀಡಿದ ಸಂಸದ ಪ್ರತಾಪ್ ಸಿಂಹ, ಪ್ರತಿಭಟನಾ ನಿರತ ರೈತರ ಮನವಿ ಆಲಿಸಿ ಕೂಡಲೇ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಈ ಕುರಿತು ಮಾತನಾಡಿದ ಅವರು,  ಸಮಸ್ಯೆ ಬಗ್ಗೆ ನಿನ್ನೆ ಕಾರ್ಮಿಕ ಸಚಿವರೊಂದಿಗೆ ಚರ್ಚೆ ಮಾಡಿದ್ದೇನೆ. ಕಾರ್ಮಿಕ ಸಚಿವರು ಕಾರ್ಖಾನೆ ಮಾಲೀಕರ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದ್ದಾರೆ. ಭೂಮಿ ಕೊಟ್ಟ ರೈತರಿಗೆ ಇದೇ ಸ್ಥಳದಲ್ಲಿ ಕೆಲಸ ನೀಡಬೇಕು.mysore-mp-prathap-simha-listen-protest-farmer-asian-paints-factory

ರೈತರ  ಬೇಡಿಕೆಗೆ ಕಾರ್ಖಾನೆ ಸ್ಪಂದಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದರು.

Key words: mysore- MP-Prathap simha-  listen – protest  farmer- Asian Paints factory.