ಅನುಮಾನ ಇರುವವರು ತಜ್ಞರನ್ನ ಕರೆತಂದು ಪರಿಶೀಲಿಸಲಿ- ಸಂಸದೆ ಸುಮಲತಾ ಅಂಬರೀಶ್ ಗೆ ಪ್ರತಾಪ್ ಸಿಂಹ ಟಾಂಗ್.

ಮೈಸೂರು,ಆಗಸ್ಟ್,18,2021(www.justkannada.in):  ದಶಪಥ ರಾಷ್ಟ್ರೀಯ ಹೆದ್ಧಾರಿ ಕಾಮಗಾರಿ ವೈಜ್ಞಾನಿಕವಾಗಿ ನಡೆಯುತ್ತಿಲ್ಲ ಎಂದು ಹೇಳಿಕೆ ನೀಡಿದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಸಂಸದ ಪ್ರತಾಪ್ ಸಿಂಹ, ಅನುಮಾನ ಇರುವವರು ತಜ್ಞರನ್ನ ಕರೆತಂದು ಪರಿಶೀಲಿಸಲಿ. ಮೈಸೂರಿಗಾಗಿ ದಶಪಥ ಹೆದ್ಧಾರಿ ನಿರ್ಮಾಣ ಮಾಡಲಾಗುತ್ತಿದೆ. ಹೆದ್ಧಾರಿ ಮಂಡ್ಯದ ಮೇಲೆ ಹೊಗುವುದರಿಂದ ಮಂಡ್ಯದವರು ರಾಮನಗರದ ಮೇಲೆ ಹೋಗುವುದರಿಂದ ರಾಮನಗರದವರು ಕಾಮಗಾರಿ ನಮ್ಮದು ಎಂದು ಕೊಂಡರೇ ಅರ್ಥ ಇದೆಯಾ..?  ಇದು ಪ್ರಧಾನಿ ಮೋದಿ ಸರ್ಕಾರದ ಯೋಜನೆಯಾಗಿದೆ ಎಂದರು.

ಇದೇ ವೇಳೆ ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಕಿಡಿಕಾರಿದ ಸಂಸದ ಪ್ರತಾಪ್ ಸಿಂಹ, ಯೋಜನೆಗೆ ಕಾಂಗ್ರೆಸ್ ನವರು ಬಿಡುಗಾಸು ಕೂಡ ಕೊಟ್ಟಿಲ್ಲ. ಸಿದ್ಧರಾಮಯ್ಯ ಹೇಳಿಕೆಯಲ್ಲಿ ಅರ್ಥವಿಲ್ಲ. ಜನರಿಂದ ತಿರಸ್ಕೃತರಾದವರಿಗೆ ಹೇಳಿಕೆ ಯಾವುದೇ ಅರ್ಥವಿಲ್ಲ ಎಂದು ಟಾಂಗ್ ನೀಡಿದರು.

Key words: mysore-MP-  Pratap Simha- Tong –MP- Sumalatha Ambarish.