‘ಅಯೋಧ್ಯ’ ಕೃತಿ ಬಿಡುಗಡೆ ಮಾಡಿದ ಸಂಸದ ಪ್ರತಾಪ್ ಸಿಂಹ.

ಮೈಸೂರು,ಜನವರಿ,19,2024(www.justkannada.in): ಲೇಖಕ ಎಸ್ ಉಮೇಶ್ ರಚಿಸಿದ ‘ಅಯೋಧ್ಯ’ ಕೃತಿಯನ್ನು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ಶುಕ್ರವಾರ ಬಿಡುಗಡೆ ಮಾಡಿದರು.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣಕ್ಕಾಗಿ ಕಳೆದ 500 ವರ್ಷಗಳಿಂದ ನಡೆದ ಹೋರಾಟದ ಕುರಿತಾಗಿ ನವಿರಾಗಿ ನಿರೂಪಿಸಿರುವ ಲೇಖಕ ಉಮೇಶ್ ಹಲವಾರು ಹೋರಾಟಗಾರರನ್ನು ವಿಶ್ವಹಿಂದೂ ಪರಿಷತ್ ಮುಖಂಡರನ್ನು ಹಾಗೂ ಹೋರಾಟದಲ್ಲಿ ಪಾಲ್ಗೊಂಡ ಇನ್ನಿತರ ರಾಮಭಕ್ತರನ್ನು ಭೇಟಿಯಾಗಿ ಸ್ವತಃ ಅಯೋಧ್ಯೆಗೆ ತೆರಳಿ ಈ ಕೃತಿಯನ್ನು ರಚಿಸಿದ್ದಾರೆ.

ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ,  ಅಯೋಧ್ಯೆ ಕುರಿತಾಗಿ ಈ ಸಂದರ್ಭದಲ್ಲಿ ಪುಸ್ತಕವನ್ನು ಬಿಡುಗಡೆ ಮಾಡಿರುವುದು ಶ್ಲಾಘನೀಯ ಎಂದರು.  ಅಯೋಧ್ಯೆ ಕುರಿತಾದ ಇತಿಹಾಸದ ಪುಟಗಳನ್ನ ತೆರೆದಿಡುವಂತಹ ಸುಸಂದರ್ಭದಲ್ಲಿ ನೀವು ಪುಸ್ತಕವನ್ನು ಬಿಡುಗಡೆ ಮಾಡಿದ್ದೀರಿ ಎಂದು ಹೇಳಿದಲ್ಲದೆ ಈ ಪುಸ್ತಕವನ್ನು ಕನ್ನಡ ಓದುಗರು ಓದಿ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.

ಸಮಾರಂಭದಲ್ಲಿ ಧಾತ್ರಿ ಪ್ರಕಾಶನದ ಪ್ರಕಾಶಕಿ ಬೃಂದ ಉಮೇಶ್,  ಲೇಖಕ ಪತ್ರಕರ್ತ ರವೀಂದ್ರ ಜೋಶಿ ಇನ್ನಿತರರು ಉಪಸ್ಥಿತರಿದ್ದರು.

Key words: mysore- MP Pratap Simha -released – Ayodhya-book