ಸಿದ್ದರಾಮಯ್ಯ ಕೊಡುಗೆ ಪ್ರಶ್ನಿಸಿದ್ದ ಪ್ರತಾಪ್ ಸಿಂಹಗೆ ಸವಾಲು: ದಾಖಲೆ ಸಮೇತ ಸಂಸದರ ಕಚೇರಿಗೆ ನುಗ್ಗಲು ಎಂ.ಲಕ್ಷ್ಮಣ್  ಯತ್ನ.

ಮೈಸೂರು,ಸೆಪ್ಟಂಬರ್,6,2023(www.justkannada.in):  ಸಿಎಂ ಸಿದ್ಧರಾಮಯ್ಯ ಕೊಡುಗೆ ಏನು ಎಂದು ಪ್ರಶ್ನಿಸಿದ್ಧ ಸಂಸದ ಪ್ರತಾಪ್ ಸಿಂಹಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಸವಾಲು ಹಾಕಿ ಇಂದು ದಾಖಲೆ ಸಮೇತ ಪ್ರತಾಪ್ ಸಿಂಹ ಕಚೇರಿಗೆ ಆಗಮಿಸಿದ್ದು ಈ ವೇಳೆ ಹೈಡ್ರಾಮಾವೇ ನಡೆಯಿತು.

ನಗರದ ಹುಣಸೂರು ರಸ್ತೆಯಲ್ಲಿರುವ ಸಂಸದರ ನಿವಾಸ ಜಲದರ್ಶಿನಿಗೆ ದಾಖಲೆ ಸಮೇತ ಆಗಮಿಸಿದ ಎಂ.ಲಕ್ಷ್ಮಣ್   ಚರ್ಚೆಗೆ ಆಹ್ವಾನಿಸಿದರು.  ಆದರೆ ಪೊಲೀಸರು ಎಂ.ಲಕ್ಷ್ಮಣ್ ಅವರನ್ನ ಕಚೇರಿಯೊಳಗೆ ಬಿಡದೇ ತಡೆದರು.

ಎಂ.ಲಕ್ಷ್ಮಣ್  ಅವರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ ಹಿನ್ನೆಲೆ ಸಂಸದರ ಕಚೇರಿಗೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Key words: Mysore-MP- Pratap simha-office- kpcc- M. Laxman