ಬೈಕ್ ನಲ್ಲಿ ತೆರೆಳುತ್ತಿದ್ದ ವೇಳೆ‌ ಮೊಬೈಲ್ ಬ್ಲಾಸ್ಟ್: ವ್ಯಕ್ತಿಗೆ ಗಂಭೀರ ಗಾಯ…

ಮೈಸೂರು,ಫೆ,17,2020(www.justkannada.in):  ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ‌ ಮೊಬೈಲ್ ಬ್ಲಾಸ್ಟ್ ಆದ ಪರಿಣಾಮ ಬೈಕ್ ಸವಾರ ಕುಸಿದು ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸಮೀಪ ಹುಲ್ಲಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಕುರಿಹುಂಡಿಯ ಬಸವರಾಜು ( ಬಸವಣ್ಣ) ಗಾಯಗೊಂಡವರು. ಕುರಿಹುಂಡಿಯಿಂದ ಹುಲ್ಲಹಳ್ಳಿಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ವಿವೋ ಮೊಬೈಲ್ ಸ್ಪೋಟಗೊಂಡಿದೆ. ಕರೆ ಬಂದ ವೇಳೆ ಈ ಘಟನೆ ನಡೆದಿದೆ.

ಮೊಬೈಲ್ ಸಿಡಿದ ರಭಸಕ್ಕೆ ಬಸವರಾಜು ಬೈಕ್ನಿಂದ  ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ಬೈಕ್ ನಿಂದ ಬಿದ್ದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಬಸವರಾಜು ಪ್ರಜ್ಞೆ ತಪ್ಪಿದರು. ಕೂಡಲೇ ಅವರನ್ನ ನಂಜನಗೂಡಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತದೆ. ಈ ಕುರಿತು ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore-Mobile Blast- Aserious injury – person