ಗಿಡ ನೆಟ್ಟು, ಕೊಟ್ಟು ಕೈ ತೊಳೆದುಕೊಳ್ಳುವ ರಾಜಕಾರಣಿ ನಾನಲ್ಲ – ಸಚಿವ ಎಸ್.ಟಿ ಸೋಮಶೇಖರ್…

ಮೈಸೂರು,ಜೂ,5,2020(www.justkannada.in): 27 ಲಕ್ಷ ಗಿಡ ನೆಡಲು ಚಾಲನೆ ಕೊಟ್ಟಿದ್ದೇವೆ. ಯಾರು ಯಾರು ಗಿಡಗಳನ್ನು ತೆಗೆದುಕೊಂಡಿದ್ದಾರೆ. ಅದನ್ನು ಅಧಿಕಾರಿಗಳು ಲೆಕ್ಕ ಇಟ್ಟಿದ್ದಾರೆ. ಇನ್ನೊಂದು ತಿಂಗಳಲ್ಲಿ ಅವುಗಳ ಲೆಕ್ಕ ಹಾಕುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಗಿಡ ನೆಟ್ಟು, ಕೊಟ್ಟು ಕೈ ತೊಳೆದುಕೊಳ್ಳುವ ರಾಜಕಾರಣಿ ನಾನಲ್ಲ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ತಿಳಿಸಿದರು.

ಮೈಸೂರಿನಲ್ಲಿ  ಇಂದು ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಪೊಲೀಸ್ ಇಲಾಖೆ, ಜಿಲ್ಲಾಡಳಿತ, ಕಾರ್ಪೋರೇಶನ್, ಮೈಸೂರು ವಿಶ್ವವಿದ್ಯಾಲಯ ಸೇರಿದಂತೆ ಹಲವು ಇಲಾಖೆಗಳಿಂದ ಗಿಡಗಳನ್ನು ಪಡೆಯಲಾಗಿದೆ. ಇನ್ನೊಂದು ತಿಂಗಳು ಬಿಟ್ಟು ಅಧಿಕಾರಿಗಳು ಅದನ್ನು ಎಲ್ಲಿ ನೆಡಲಾಗಿದೆ. ನಿರ್ವಹಣೆ ಜವಾಬ್ದಾರಿಯನ್ನು ಯಾರು ವಹಿಸಲಿದ್ದಾರೆ  ಎಂಬ ನಿಟ್ಟಿನಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದರು. mysore- minister –ST Somashekar- World Environment Day

ಅನ್ಯತಾ ಭಾವಿಸುವುದು ಬೇಡ…

ಇಲ್ಲಿ ಗಿಡಗಳನ್ನು ಲೆಕ್ಕ ಮಾಡುವ ಹಾಗೂ ಲೆಕ್ಕ ಕೇಳುವ ಬಗ್ಗೆ ಯಾರೂ ಅನ್ಯತಾ ಭಾವಿಸುವುದು ಬೇಡ. ಈವರೆಗೆ ನಾನು ಗಮನಿಸಿದಂತೆ ವಿಶ್ವ ಪರಿಸರ ದಿನದಂದು ಎಲ್ಲರೂ ಬಂದು ಗಿಡಗಳನ್ನು ಪಡೆಯುವುದು, ನೆಡುವುದನ್ನು ಮಾಡಿ ಹೋಗುತ್ತಾರೆ. ಬಳಿಕ ಅದು ಏನಾಯಿತು ಎಂದು ಯಾರೂ ಚಿಂತಿಸುವುದಿಲ್ಲ. ಈ ಕಾರಣಕ್ಕಾಗಿ ನೆಟ್ಟ ಪ್ರತಿಯೊಂದು ಗಿಡವನ್ನೂ 3 ವರ್ಷಗಳ ಕಾಲ ನಿರ್ವಹಣೆ ಜವಾಬ್ದಾರಿಯನ್ನು ಯಾರು ಹೊತ್ತಿದ್ದಾರೆಂಬುದನ್ನೂ ನಾವು ಪರಿಗಣನೆಗೆ ತೆಗೆದುಕೊಳ್ಳುತ್ತಿದ್ದೇವೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

ಚಾಮುಂಡಿ ಬೆಟ್ಟದಲ್ಲಿ 1 ಲಕ್ಷ ಗಿಡ…

ಚಾಮುಂಡಿ ಬೆಟ್ಟದಲ್ಲಿ 1 ಲಕ್ಷ ಗಿಡವನ್ನು ನೆಡುವ ಯೋಜನೆ ಇದ್ದು, ಈ ಬಗ್ಗೆ ಚರ್ಚಿಸಲು ಅರಣ್ಯ ಇಲಾಖೆ ಸಚಿವರನ್ನು ಕರೆಸಿ ಸಭೆ ನಡೆಸಲಾಗುವುದು. ಬಳಿಕ ಇಲ್ಲಿ ಗಿಡ ನೆಟ್ಟ ಮೇಲೆ 3 ವರ್ಷಗಳವರೆಗೆ ನಿರ್ವಹಣೆ ಜವಾಬ್ದಾರಿಯನ್ನು ಯಾರು ವಹಿಸಿಕೊಳ್ಳಲಿದ್ದಾರೆ. ಯಾವ ರೀತಿ ಹಾಗೂ ಯಾವ ಗಿಡಗಳನ್ನು ಮೆಡಬೇಕು ಎಂಬ ಬಗ್ಗೆ ನಿರ್ಧರಿಸಲಾಗುವುದು ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.

ವರ್ಗಾವಣೆ ಪ್ರಕ್ರಿಯೆ ಆರಂಭವಾಗಿಲ್ಲ

ವರ್ಗಾವಣೆ ಪ್ರಕ್ರಿಯೆ ಸರ್ಕಾರದಿಂದ ಆಗಿಲ್ಲ. ವರ್ಗಾವಣೆಗೆ ಸಂಬಂಧಪಟ್ಟಂತೆ ಆಯಾ ಜಿಲ್ಲೆಯ ಶಾಸಕರಿಗೆ ಬಿಟ್ಟಿದ್ದು, ಅಬಕಾರಿ ಡಿಸಿ ವರ್ಗಾವಣೆಗೆ ಸಂಬಂಧಪಟ್ಟಂತೆ ಎಲ್ಲೂ ಮಾಜಿ ಸಚಿವರಾದ ಎಚ್. ವಿಶ್ವನಾಥ್ ಅವರಾಗಲೀ, ಇಲ್ಲಿನ  ಶಾಸಕರಾಗಲೀ ಹಸ್ತಕ್ಷೇಪ ಮಾಡುತ್ತಿಲ್ಲ. ಅಬಕಾರಿ ಡಿಸಿಯವರು ಅಕ್ರಮ ಮಾಡಿದ್ದಾರೆಂಬ ವರದಿ ಬಂದ ಹಿನ್ನೆಲೆಯಲ್ಲಿ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಸ್ಪಷ್ಟನೆ ನೀಡಿದರು.

ಮನೆ ಮನೆಗೆ ಕೇಂದ್ರದ ಸಾಧನೆ

ಕೇಂದ್ರ ಸರ್ಕಾರದ ಯೋಜನೆಗಳು ಹಲವಾರು ಇದ್ದು, ಅದನ್ನು ಪ್ರತಿ ಮನೆ ಮನೆಗೆ ತಲುಪಿಸುವ ಕೆಲಸವನ್ನು ಕಾರ್ಯವನ್ನು ರಾಜ್ಯಾದ್ಯಂತ ಮಾಡಲಾಗುತ್ತಿದೆ. ಇಂದು ಶಾಸಕರಾದ ಎಸ್.ಎ.ರಾಮದಾಸ್ ಅವರು, ಜನರೇ ಪ್ರೇರಕ, ನಾನು ಪ್ರಧಾನ ಸೇವಕ ಎಂಬ ಸಾಧನೆಗಳ ಪ್ರತಿಯನ್ನು ಹಂಚಿಕೆ ಮಾಡಲು ಕೃಷ್ಣರಾಜ ಕ್ಷೇತ್ರದ 51ನೇ ವಾರ್ಡ್ ನಿಂದ ಚಾಲನೆ ನೀಡಲಾಗಿದೆ. ನಾಳೆ ಶಾಸಕರಾದ ನಾಗೇಂದ್ರ ಅವರ ಕ್ಷೇತ್ರದಲ್ಲಿ ಚಾಲನೆ ನೀಡಲಿದ್ದಾರೆ. ಭಾನುವಾರ ನನ್ನ ಯಶವಂತಪುರ ಕ್ಷೇತ್ರದಲ್ಲಿ ಹಂಚುವ ಕೆಲಸ ಮಾಡಲಾಗುತ್ತಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

Key words: mysore- minister –ST Somashekar- World Environment Day