ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರ ಮಗ ಕಡ್ಲೇಪುರಿ ತಿಂತಿದ್ರಾ..? ಸಚಿವ ಎಸ್.ಟಿ ಸೋಮಶೇಖರ್ ತಿರುಗೇಟು…

ಮೈಸೂರು,ಜೂ,3,2020(www.justkannada.in):  ಬಿಎಸ್‌ವೈ ಮಗ ಸೂಪರ್ ಸಿಎಂ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರ ಮಗ ಕಡ್ಲೆಪುರಿ ತಿಂತಿದ್ರಾ? ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮಾಡಿದ್ದೇನು.? ಎಂದು ಸಚಿವ ಎಸ್.ಟಿ ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.mysore- minister- ST Somashekar-former CM-siddaramaiah

ಮೈಸೂರಿನಲ್ಲಿ ಇಂದು ಮಾತನಾಡಿದ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ , ನಾನು ಮಂತ್ರಿಯಾಗಿ ಮೂರು ತಿಂಗಳಾಯ್ತು. ಈವರೆಗೂ  ವಿಜಯೇಂದ್ರ ಆಡಳಿತದಲ್ಲಿ ಮೂಗು ತೂರಿಸಿಲ್ಲ. ಸಿಎಂ ಮಗನ‌ ಬಳಿ ಹೋಗಿ ಅಂತ ನಿರ್ದೇಶನ ಮಾಡಿಲ್ಲ. ಅಂತಹ ಅನುಭವ ನನಗಾಗಲಿ ನನ್ನ ಸಹೋದ್ಯೋಗಿಗಳಿಗಾಗಲಿ ಆಗಿಲ್ಲ. ಸಿದ್ದರಾಮಯ್ಯ ರಾಜಕೀಯ ಕಾರಣಕ್ಕೆ ಟೀಕೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯರ ಆರೋಪಗಳಲ್ಲಿ ಸತ್ಯವಿಲ್ಲ ಎಂದು ಕಿಡಿಕಾರಿದರು.

ಈ ರೀತಿಯೇ ಮಾತಾಡಿಯೇ ಎಂಟಿಬಿ ಸೋತಿದ್ದು….

ನಾನು MLC ಆಗಲು ಬಿಜೆಪಿಯವರು ಅಡ್ಡಗಾಲು ಎಂಬ MTB ನಾಗರಾಜ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಅಸಮಾಧಾನ ಹೊರಹಾಕಿದ ಸಚಿವ ಎಸ್.ಟಿ ಸೋಮಶೇಖರ್, ಈ ರೀತಿಯೇ ಮಾತಾಡಿಯೇ ಎಂಟಿಬಿ ಸೋತಿದ್ದು. ಇಲ್ಲಿ ಯಾರಿಗು ಯಾರ ಅಡ್ಡಗಾಲು ಇಲ್ಲ. ಮುಖ್ಯಮಂತ್ರಿಗಳಿಗೆ ಎಲ್ಲವು ಗೊತ್ತಿದೆ. ಮುಖ್ಯಮಂತ್ರಿ ಎಲ್ಲವನ್ನೂ ತೀರ್ಮಾನ ಮಾಡ್ತಾರೆ. ರೋಷನ್ ಬೇಗ್, ವಿಶ್ವನಾಥ್, ಶಂಕರ್, ಎಂಟಿಬಿ ಎಲ್ಲರು ಒಂದೇ. ಎಲ್ಲರ ವಿಚಾರದಲ್ಲು ನಮ್ಮದು ಒಂದೇ ನಿಲುವು. ಕೊಟ್ಟ ಮಾತನ್ನು ಸಿಎಂ ಈಡೇರಿಸುತ್ತಾರೆಂಬ ವಿಶ್ವಾಸ ಇದೆ. ನಾವು ಕೂಡ ಮತ್ತೊಮ್ಮೆ ಸಿಎಂಗೆ ಮನವಿ ಮಾಡಿದ್ದೇವೆ. ಅಂತಿಮವಾಗಿ ಸಿಎಂ ಅವರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

Key words: mysore- minister- ST Somashekar-former CM-siddaramaiah