Thursday, September 17, 2026

BDA Apartments

ಮೈಸೂರಿನ ಗನ್ ಹೌಸ್ ವೃತದ ಬಳಿ ನೂತನ ಬಸ್ ತಂಗುದಾಣ ಲೋಕಾರ್ಪಣೆ BDA JK_Adv BDA Adv
Home Front Page ಮೈಸೂರಿನ ಗನ್ ಹೌಸ್ ವೃತದ ಬಳಿ ನೂತನ ಬಸ್ ತಂಗುದಾಣ ಲೋಕಾರ್ಪಣೆ.

ಮೈಸೂರಿನ ಗನ್ ಹೌಸ್ ವೃತದ ಬಳಿ ನೂತನ ಬಸ್ ತಂಗುದಾಣ ಲೋಕಾರ್ಪಣೆ.

ಮೈಸೂರು, ಜೂ.19, 2021 : (www.justkannada.in news ) ಮೈಸೂರು ಮಹಾನಗರ ಪಾಲಿಕೆ ಹಾಗೂ ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ಸ್ರೆಂಟಲ್ ಸಂಸ್ಥೆ ಸಹಯೋಗ ದಲ್ಲಿ ಗನ್ ಹೌಸ್ ವೃತದ ಬಳಿಯ ವಿಶ್ವಮಾನವ ಉದ್ಯಾನವನದ ಹಿಂಭಾಗದ ನಂಜನಗೂಡು ಮುಖ್ಯರಸ್ತೆಯಲ್ಲಿ ನಿರ್ಮಿಸಿರುವ ನೂತನ ಬಸ್ ತಂಗುದಾಣ ಇಂದು ಲೋಕಾರ್ಪಣೆಗೊಂಡಿತು.

jk

ಕ್ಷೇತ್ರದ ಶಾಸಕ ಎಸ್.ಎ ರಾಮದಾಸ್ ನೂತನ ಬಸ್ ತಂಗುದಾಣ ಲೋಕಾರ್ಪಣೆಗೊಳಿಸಿ ಮಾತನಾಡಿ, ನಂಜನಗೂಡು, ಚಾಮರಾಜನಗರ ಗುಂಡ್ಲುಪೇಟೆ ,ತಮಿಳುನಾಡು ಎಲ್ಲಾ ಭಾಗಗಳಿಗೂ ಸಂಪರ್ಕ ನೀಡುವ ನಂಜನಗೂಡು ಮುಖ್ಯರಸ್ತೆಯಲ್ಲಿ ತಂಗುದಾಣ ಬೇಕಾಗಿತ್ತು, ಈ ಕೆಲಸವನ್ನು ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ತಮ್ಮ ಸಂಸ್ಥೆಯು 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಖರ್ಚು ವೆಚ್ಚಗಳೊಂದಿಗೆ ನಿರ್ಮಿಸಿ ನಗರಪಾಲಿಕೆಗೆ ಹಸ್ತಾOತರಿಸಿದ್ದಾರೆ, ಇಂತಹ ಶ್ಲಾಘನೀಯ ಕೆಲಸ ನಿರ್ವಹಿಸಿದ ತಂಡಕ್ಕೆ ಅಭಿನಂದನೆಗಳು ಎಂದರು.

ಈ ಕಾರ್ಯಕ್ರಮದಲ್ಲಿ ನಗರಪಾಲಿಕೆ ಸದಸ್ಯ ಬಿ.ವಿ ಮಂಜುನಾಥ್, ಪ್ರಭಾರ ಮಹಾಪೌರ ಅನ್ವರ್ ಬೇಗ್, ನಗರಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ, ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು ಮುಖಂಡರಾದ ಶ್ರೀವತ್ಸ ಹಾಗೂ ಇತರರು ಭಾಗವಹಿಸಿದ್ದರು.

 

key words : mysore-mcc-bus.shelter-bjp-mla-ramadas-rotary