ಅಸಂಘಟಿತ ವಲಯದಲ್ಲಿ ಸೇವೆ ಸಲ್ಲಿಸಿದ50 ಕ್ಕೂ ಹೆಚ್ಚು ಮಂದಿಯನ್ನ ಸನ್ಮಾನಿಸಿದ ಮೈಸೂರು ಮೇಯರ್ ತಸ್ನೀಂ

ಮೈಸೂರು,ಮಾ,8,2020(www.justkannada.in): ಅಸಂಘಟಿತ ವಲಯದಲ್ಲಿ ಸೇವೆ ಸಲ್ಲಿಸಿದ ಹಲವು ಮಂದಿಗೆ ಮೈಸೂರು ಮಹಾನಗರ ಪಾಲಿಕೆ ಮೇಯರ್ ತಸ್ನೀಂ ಸನ್ಮಾನಿಸಿದರು.

ಕಾಯಕಯೋಗಿಗಳಿಗೆ ಆತ್ಮೀಯ ಸನ್ಮಾನ ಸಾರ್ಥಕ ಕಾರ್ಯಕ್ರಮಕ್ಕೆ ಮೈಸೂರು ಶಾರದ ವಿಲಾಸ ಶತಮಾನೋತ್ಸವ ಭವನ ಇಂದು ಸಾಕ್ಷಿಯಾಗಿತ್ತು. ಕುಂಬಾರರು, ಚಿಂದಿ ಆಯುವವರು, ಭಟ್ಟಿ ಕಾರ್ಮಿಕರು, ಹಮಾಲಿಗಳು, ಕಮ್ಮಾರರು, ಮನೆ ಕೆಲಸದವರು, ಅಕ್ಕಸಾಲಿಗರು, ಕ್ಷೌರಿಕರು, ಮೆಕ್ಯಾನಿಕ್ ಗಳು, ಅಗಸರು, ಟೈಲರ್ ವೃತ್ತಿಯಲ್ಲಿ ಸೇವೆ ಸಲ್ಲಿಸಿದ 50 ಕ್ಕೂ ಹೆಚ್ಚು ಮಂದಿಗೆ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಕಾರ್ಮಿಕ ಇಲಾಖೆ, ಅಸಂಘಟಿತ ಕಾರ್ಮಿಕರ ಭದ್ರತಾ ಮಂಡಳಿ ಸಹಯೋಗದಲ್ಲಿ  ಸನ್ಮಾನ ಕಾರ್ಯಕ್ರಮ ನಡೆಯಿತು.

ನಗರದ ಶಾರದ ವಿಲಾಸ ಶತಮಾನೋತ್ಸವ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಯಕಯೋಗಿಗಳನ್ನ ಮೇಯರ್ ತಸ್ನೀಂ ಸನ್ಮಾನಿಸಿದರು.

Key words: Mysore Mayor -Tasneem -honored  -served – unorganized sector