ಮೈಸೂರಿನಲ್ಲಿ ಹಾಡಹಗಲೆ ಯುವಕನ ಭೀಕರ ಹತ್ಯೆ..

 

ಮೈಸೂರು, ಜೂ.29, 2019 : (www.justkannada.in news) ನಗರದ ಊಟಿ ರಸ್ತೆಯ ಜೆಎಸ್ ಎಸ್ ಕಾಲೇಜಿನ ಬಳಿ‌ ಹಾಡಹಗಲೆ ಯುವಕನನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.

ಸುನೀಲ್ (30)ಕೊಲೆಯಾದ ಯುವಕ.ಮೈಸೂರಿನ ಗುಂಡೂರಾವ್ ನಗರದ ವಾಸಿ ಸುನೀಲ್. ನಡು ರಸ್ತೆಯಲ್ಲಿ ಮಚ್ಚು ಲಾಂಗು ಝಳಪಳಿಸಿ ಪಾತಕಿಗಳಿಂದ ಕೃತ್ಯ.

ದೇವರಾಜ ಮಾರುಕಟ್ಟೆಯಲ್ಲಿ ಕುಂಕುಮ ಮಾರಾಟದ ಅಂಗಡಿ ನಡೆಸುತ್ತಿದ್ದ ಯುವಕ. ಜತೆಗೆ ಬಡ್ಡಿ ಲೇವಾದೇವಿಯನ್ನು ವೃತ್ತಿಯನ್ನಾಗಿಸಿಕೊಂಡಿದ್ದ   ಸುನೀಲ್. ಈತನ ಪರಿಚಿತ ವ್ಯಕ್ತಿ ಬೆಟ್ಟ ಎಂದು ಅಡ್ಡ ಹೆಸರಿನಿಂದ ಕರೆಯುವ ಯುವಕನಿಂದಲೇ ಈ ಕೃತ್ಯ. ಡ್ರ್ಯಾಗನ್ ನಿಂದ ಚುಚ್ಚಿ ಕೊಲೆ ಮಾಡಿದ ಆರೋಪಿ ಬೆಟ್ಟ. ತಲೆ ಮರೆಸಿಕೊಂಡಿರುವ ಆರೋಪಿಗೆ ಶೋಧ ಕಾರ್ಯ ನಡೆಸುತ್ತಿರುವ ಪೊಲೀಸರು. ಮೇಲ್ನೊಟ್ಟಕ್ಕೆ ಲೇವಾದೇವಿ ವ್ಯವಹಾರದ ವೈಮನಸ್ಯೆಯೇ ಕಾರಣ ಎಂಬ ಶಂಖೆ. ಪೊಲೀಸರ ತನಿಖೆಯಿಂದ ಹೊರ ಬೀಳಬೇಕಾಗಿರುವ ಸತ್ಯಾಂಶ.

ಸ್ಥಳಕ್ಕೆ ಮೈಸೂರಿನ ಕೆ.ಆರ್.ಠಾಣೆ ಪೋಲಿಸರ ಭೇಟಿ ಪರಿಶೀಲನೆ.

 

key words : Mysore massacre of a young man near JSS college, ooty road