ಅ.15 ರಂದು ಮಹಿಷ ದಸರಾ: ತಡೆಯುವವರು ಕಂತ್ರಿಗಳು….

0
423

ಮೈಸೂರು,ಸೆಪ್ಟಂಬರ್, 22,2020(www.justkannada.in): ಕೊರೋನಾ ಹಿನ್ನೆಲೆ ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾ ಸರಳ ಆಚರಣೆಗೆ ಸರ್ಕಾರ ನಿರ್ಧರಿಸಿದ್ದು ಇದಕ್ಕಾಗಿ ಸಿದ್ಧತೆ ನಡೆಸಲಾಗುತ್ತಿದೆ.  ಈ ಮಧ್ಯೆ ಮಹಿಷ ದಸರಾ ಆಚರಿಸಲು ಅನುಮತಿ ನೀಡುವಂತೆ  ಒತ್ತಾಯ ಕೇಳಿ ಬಂದಿದೆ.jk-logo-justkannada-logo

ಅಕ್ಟೋಬರ್ 15 ರಂದು ಮಹಿಷದಸರಾ ಆಚರಣೆ ಮಾಡಲು ನಿರ್ಧರಿಸಿದ್ದು ಈ ಕುರಿತು ಜಂಟಿ ಸುದ್ಧಿಗೋಷ್ಠಿ ನಡೆಸಿ ಪ್ರಗತಿಪರ ಚಿಂತಕ ಪ್ರೊ. ಭಗವಾನ್, ಪ್ರೊ. ಮಹೇಶ್ ಚಂದ್ರಗುರು ಹಾಗೂ ಮಾಜಿ ಮೇಯರ್  ಪುರುಷೋತ್ತಮ್ ಮಾತನಾಡಿ ಮಹಿಷ ದಸರಾ ಆಚರಣೆಗೆ ಅನುಮತಿ ನೀಡುವಂತೆ ಆಗ್ರಹಿಸಿದರು.

ಮಹಿಷ ದಸರಾ ಕಾರ್ಯಕ್ರಮ ವಿರೋಧಿಸುವವರು ಕಂತ್ರಿಗಳು…

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಪ್ರೊ. ಮಹೇಶ್ ಚಂದ್ರಗುರು, ಮಹಿಷ ದಸರಾ ಕಾರ್ಯಕ್ರಮ ವಿರೋಧಿಸುವವರು ಕಂತ್ರಿಗಳು. ಮಹಿಷ ದಸರಾ ಆಚರಣೆ ವಿರೋಧಿಸುವವರು ಸಂವಿಧಾನ ವಿರೋಧಿಗಳು, ಮೂಲ ನಿವಾಸಿಗಳ ವಿರೋಧಿಗಳು, ಪ್ರಜಾಪ್ರಭುತ್ವ ವಿರೋಧಿಗಳು ಎಂದು ಕಿಡಿಕಾರಿದರು.

ನನ್ನ ಮೂಲ ಹೆಸರು ಮಹಿಷ ಚಂದ್ರ ಗುರು ಎಂದು. ಆದರೆ ಶಾಲೆಯಲ್ಲಿ ಶಿಕ್ಷಕರು ಮಹೇಶ್ ಚಂದ್ರ ಗುರು ಎಂದು ಮಾಡಿದ್ದಾರೆ. ಚರಿತ್ರೆಯನ್ನು ನೆನಪಿಸಿಕೊಳ್ಳಲು ಮಹಿಷ ದಸರಾ ಮಾಡುತ್ತಿದ್ದೇವೆ. ನಾವು ದೇಶದ ಮೂಲ ನಿವಾಸಿಗಳು. ಇಂದು ನಮ್ಮನ್ನು ಆಳುತ್ತಿರುವವರು ಮೂಲ ನಿವಾಸಿಗಳ ವಿರೋಧಿಗಳು. ಸರ್ಕಾರ ಮಹಿಷ ದಸರಾ ಆಚರಣೆಗೆ ಅಡ್ಡಿ ಮಾಡಬಾರದು ಎಂದು ಕೈ ಮುಗಿದು ಬೇಡುವುದಿಲ್ಲ, ಆದರೆ ಎಚ್ಚರಿಕೆ ನೀಡುತ್ತಿದ್ದೇನೆ‌ ಎಂದು ಪ್ರೋ.ಮಹೇಶ್ ಚಂದ್ರ ಗುರು ತಿಳಿಸಿದರು.

ಮಹಿಷನ ಇತಿಹಾಸ ಕೇಳುವವರಿಗೆ ಸವಾಲು ಹಾಕುತ್ತಿದ್ದೇನೆ- ಮಾಜಿ ಮೇಯರ್ ಪುರುಷೋತ್ತಮ್

ಇದೇ ವೇಳೆ ಮಾತನಾಡಿದ ಮಾಜಿ ಮೇಯರ್ ಪುರುಷೋತ್ತಮ್, ಐದು ವರ್ಷಗಳು ಯಾವುದೇ ಸಮಸ್ಯೆ ಇಲ್ಲದೇ ಮಹಿಷ ದಸರಾ ಆಚರಿಸುತ್ತಾ ಬಂದಿದ್ದೇವೆ. ಕಳೆದ ಬಾರಿ ಒಬ್ಬ ಸಂಸದರು ನಮ್ಮ ಕಾರ್ಯಕ್ರಮವನ್ನು ಮೊಟಕುಗೊಳಿಸಿದ್ರು. ಪ್ರಜಾಪ್ರಭುತ್ವಕ್ಕೆ ಅಗೌರವ ತರುವ ಕೆಲಸ ಮಾಡಿದ್ದರು. ಇತಿಹಾಸವುಳ್ಳ ಹಲವಾರು ದಾರ್ಶನಿಕರ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ. ಅದೇ ರೀತಿ ಮಹಿಷಾಸುರನಿಗೂ ಇತಿಹಾಸವಿದೆ. ಇದನ್ನು ‌ಎಲ್ಲಿ ಬೇಕಾದರೂ ಚರ್ಚೆ  ಮಾಡಲು ಸಿದ್ದವಿದ್ದೇವೆ. ಮಹಿಷನ ಇತಿಹಾಸ ಕೇಳುವವರಿಗೆ ಸವಾಲು ಹಾಕುತ್ತಿದ್ದೇನೆ. ಯಾವುದೇ ವೇದಿಕೆಯಲ್ಲೂ ನೇರ ಚರ್ಚೆಗೆ ಬರಲಿ ನಾವು ಸಿದ್ದರಿದ್ದೇವೆ ಎಂದು ಸವಾಲು ಹಾಕಿದರು.

ಈಗಾಗಲೇ ಮಹಿಷ ದಸರಾ ಆಚರಣೆ ಸಂಬಂಧ ಡಿಸಿ ಹಾಗೂ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದೇವೆ‌. ಅಕ್ಟೋಬರ್ 15ರಂದು ಮಹಿಷದಸರಾ ಆಚರಣೆ ಮಾಡುತ್ತೇವೆ. ನಮ್ಮ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ನೀಡಬೇಕು. ಅನುಮತಿಗೆ ನೀಡಲಿಲ್ಲ ಅಂದ್ರೂ ನಮ್ಮ ಕಾರ್ಯಕ್ರಮಕ್ಕೆ ಅಡ್ಡಿಪಡಿಸಬಾರದು ಎಂದು ಪುರುಷೋತ್ತಮ್ ತಿಳಿಸಿದರು.

ಮಹಿಷಾ ಒಬ್ಬ ಅಸುರ ಅಲ್ಲ, ಆತ ಮಾನವತವಾದದ ಬೌದ್ಧ ರಾಜ- ಹಿರಿಯ ಸಾಹಿತಿ ಪ್ರೊ. ಭಗವಾನ್…

ಹಾಗೆಯೇ ಹಿರಿಯ ಸಾಹಿತಿ ಪ್ರೊ ಭಗವಾನ್ ಮಾತನಾಢಿ, ಬೌದ್ಧ ಧರ್ಮ ದೇಶದ ಮೂಲ ಧರ್ಮ. ಈ ಮಹಾನ್ ಧರ್ಮವನ್ನು ಹರಡಿದವನು ಮಹಿಷಾ. ಮಹಿಷಾ ಒಬ್ಬ ಅಸುರ ಅಲ್ಲ, ಆತ ಮಾನವತವಾದದ ಬೌದ್ಧ ರಾಜ. ಇಂತಹ ಮಹಾನ್ ವ್ಯಕ್ತಿಯ ಸ್ಮರಿಸುವ ಕೆಲಸವನ್ನು‌ ನಾವು ಮಾಡುತ್ತಿದ್ದೇವೆ. ಇದನ್ನ ಪ್ರಶ್ನೆ ಮಾಡುವವರು ಯಾರೇ ಬಂದರೂ ಚರ್ಚೆಗೆ ಸಿದ್ದ ಎಂದು ಸವಾಲು ಹಾಕಿದರು.mysore-mahisha-dasara-mahesh-chandra-guru-ks-baghavan-purushoatham

ಮೈಸೂರಿಗೆ ಹಿಂದೆ ಮಹಿಷಪುರ ಎಂಬ ಹೆಸರಿತ್ತು. ಅವನು ಕೆಟ್ಟವನಾಗಿದ್ದರೆ ಮೈಸೂರಿಗೆ ಮಹಿಷಾಸುರನ ಹೆಸರು ಏಕೆ ಬರುತ್ತಿತ್ತು.?  ನಾವು ಬೇರೆಯವರ ಆಚರಣೆಗೆ ಅಡ್ಡಿಪಡಿಸಿಲ್ಲ, ಹಾಗಾಗಿ ನಮ್ಮ ಆಚರಣೆಗೆ ಯಾರೂ ತೊಂದರೆ ಕೊಡಬಾರದು. ಕಾನೂನಾತ್ಮಕವಾಗಿ ನಮ್ನ ಆಚರಣೆಗೆ ಅನುಮತಿ ನೀಡಬೇಕು ಎಂದು ಹಿರಿಯ ಸಾಹಿತಿ ಪ್ರೋ.ಭಗವಾನ್  ಆಗ್ರಹಿಸಿದರು.

Key words:  mysore-mahisha dasara-mahesh Chandra guru-KS Baghavan-Purushoatham