ಮೈಸೂರಿನ ವಕೀಲರಿಗೆ 2 ಸಾವಿರ ಡೈರಿ ವಿತರಣೆ- ಹೈಕೋರ್ಟ್ ನ್ಯಾ. ಶ್ರೀ ಕೃಷ್ಣ ಎಸ್ ದೀಕ್ಷಿತ್  ಭಾಗಿ…

ಮೈಸೂರು,ಡಿಸೆಂಬರ್,26,2020(www.justkannada.in):  ಮೈಸೂರು ವಕೀಲರ ಸಂಘ ಹಾಗೂ ಲಾಗೈಡ್ ಕನ್ನಡ  ಮಾಸಪತ್ರಿಕೆ ವತಿಯಿಂದ 2021ರ ಡೈರಿ ಬಿಡುಗಡೆ ಕಾರ್ಯಕ್ರಮವನ್ನು ಮೈಸೂರಿನ ನ್ಯಾಯಾಲಯದ ಆವರಣದಲ್ಲಿರುವ ಮೈಸೂರು ವಕೀಲರ ಸಂಘದ ಸಭಾಂಗಣದಲ್ಲಿ ನಡೆಸಲಾಯಿತು. Teachers,solve,problems,Government,bound,Minister,R.Ashok

ಬೆಳಗ್ಗೆ 10.30ಕ್ಕೆ ಆರಂಭವಾದ ಕಾರ್ಯಕ್ರಮವನ್ನು ಹೈಕೋರ್ಟ್‌ನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಕೃಷ್ಣ ಎಸ್ ದೀಕ್ಷಿತ್ ಅವರು ಉದ್ಘಾಟನೆ ಮಾಡಿದರು. ಇದೇ ವೇಳೆ ಲಾಗೈಡ್‌ ನ 2021ರ ಡೈರಿ ಬಿಡುಗಡೆ ಮಾಡಲಾಯ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಮೈಸೂರು ವಕೀಲರ ಸಂಘದ ಅಧ್ಯಕ್ಷ ಆನಂದ್ ಕುಮಾರ್ ಎಸ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮೈಸೂರು ವಕೀಲರ ಸಂಘದ ಕಾರ್ಯದರ್ಶಿ ಶಿವಣ್ಣ ಬಿ ಉಪಾಧ್ಯಕ್ಷ ಶಿವಣ್ಣೇ ಗೌಡ ಎಸ್ ಜಿ ಸೇರಿ ಮೈಸೂರು ನ್ಯಾಯಾಲಯದ ಹಿರಿಯ ಕಿರಿಯ ನ್ಯಾಯಾಧೀಶರು, ಹಿರಿಯ ವಕೀಲರು ಕಿರಿಯ ವಕೀಲರು, ನ್ಯಾಯಾಲಯದ ಸಿಬ್ಬಂದಿ ಲಾಗೈಡ್ ಕನ್ನಡ ಕಾನೂನು ಮಾಸ ಪತ್ರಿಕೆ ಬಳಗದ ಸದಸ್ಯರು ಭಾಗವಹಿಸಿದ್ದರು.

ಲಾ ಗೈಡ್ ಪತ್ರಿಕೆಯ ಸಂಪಾದಕ ಹೆಚ್ ಎನ್ ವೆಂಕಟೇಶ್, ನ್ಯಾಯಮೂರ್ತಿಗಳಾದ ಶ್ರೀ ಕೃಷ್ಣ ಎಸ್ ದೀಕ್ಷಿತ್ ಅವರ ಪರಿಚಯ‌ ಮಾಡಿಕೊಟ್ಟರು. ನಂತರ ನ್ಯಾಯಮೂರ್ತಿ ಅವರಿಗೆ ಮೈಸೂರು ಪೇಟ ತೊಡಿಸಿ. ಶಾಲು ಹೊದಿಸಿ  ವಿಶ್ವವಿಖ್ಯಾತ ಮೈಸೂರು ಅರಮನೆಯ ಪ್ರತಿಕೃತಿ ನೀಡಿ ಆತ್ಮೀಯವಾಗಿ ಗೌರವಿಸಲಾಯ್ತು.mysore-lawyers-association-law-guide-magazine-distributing-2-thousand-diaries-lawyers

ಇದೇ ಸಂದರ್ಭದಲ್ಲಿ ಮೈಸೂರಿನ ವಕೀಲರಿಗೆ 2 ಸಾವಿರ ಡೈರಿಗಳನ್ನು ಉಚಿತವಾಗಿ ನೀಡಲಾಯ್ತು.  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲಾಯ್ತು.

ಕಾರ್ಯಕ್ರಮದಲ್ಲಿ ಶಾರದ ವಿಲಾಸ ಕಾನೂನು ಕಾಲೇಜಿನ ಉಪನ್ಯಾಸಕರು ಹಾಗೂ ಹಿರಿಯ ವಕೀಲರಾದ ಎಸ್ ಲೋಕೇಶ್, ಎಂ.ಡಿ ಹರೀಶ್ ಕುಮಾರ್ ಹೆಗ್ಡೆ, ಮೈಸೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಜಿ ವಿ ರಾಮಮೂರ್ತಿ, ನಗರ ಪಾಲಿಕೆ ಸದಸ್ಯ ಲೋಕೇಶ್ ಪಿಯಾ ಸೇರಿ ಹಲವರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಶ್ರೀ ಕೃಷ್ಣ ಎಸ್ ದೀಕ್ಷಿತ್ ಅವರ ಭಾಷಣ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ದೇಶದ ತುರ್ತು ಪರಿಸ್ಥಿತಿಯ ಸಮಯ, ರಾಮಾಯಾಣದ ಪಾತ್ರಗಳು ಪರಿಸ್ಥಿತಿಯ ಉಲ್ಲೇಖ ಸೇರಿದಂತೆ ತಮ್ಮ ಅನೇಕ ವಿಶೇಷ ಅನುಭವಗಳನ್ನು ಹಂಚಿಕೊಂಡರು. ಇದೇ ವೇಳೆ ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆಯ ಸಂಪಾದಕ ಹೆಚ್ ಎನ್ ವೆಂಕಟೇಶ್ ಅವರ ಕಾರ್ಯವನ್ನು ಶ್ಲಾಘಿಸಿದರು. ಅವರ ಕಾರ್ಯಕ್ರಮವಾಗಿದ್ದರಿಂದ ತಪ್ಪದೆ ಬಂದಿದ್ದೇನೆ ಎಂದು ತಿಳಿಸಿದರು. ಇದೇ ವೇಳೆ ವಕೀಲರಿಗೆ ವೃತ್ತಿಗೆ ಸಂಬಂಧಪಟ್ಟಂತೆ ಹಲವು ಉಪಯುಕ್ತ ಸಲಹೆಗಳನ್ನು‌ ನೀಡಿದರು.

Key words: Mysore Lawyers Association – law guide- magazine- Distributing -2 thousand -diaries -lawyers.