ವಿವಾದಕ್ಕೆ ಎಡೆ, ಪ್ರವಾಸೋದ್ಯಮ ಇಲಾಖೆ ನಡೆ : ಪ್ರಕರಣ ಇತ್ಯರ್ಥಕ್ಕೂ ಮುನ್ನವೇ ಲಲಿತಮಹಲ್ ಪ್ಯಾಲೇಸ್ ಕಾಂಪೌಂಡ್ ನಿರ್ಮಾಣ ಕಾಮಗಾರಿ ಆರಂಭ.

 

ಮೈಸೂರು, ಆ.26, 2021 : ನಗರದ ವಿವಾದಿತ ಜಮೀನಿನಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಬಿಗಿ ಪೊಲೀಸ್ ಬಂದೋ ಬಸ್ತ್ ನಡುವೆ ಚಾಲನೆ ದೊರೆತಿದೆ.

ಮೈಸೂರು ತಾಲೂಕು ಕಸಬಾ ಹೋಬಳಿ ಕುರುಬಾರಹಳ್ಳಿ ಸರ್ವೆ ನಂ 4 ರ ವಿವಾದಿತ ಜಮೀನಿನಲ್ಲಿ ಲಲಿತಮಹಲ್ ಪ್ಯಾಲೇಸ್ ಗೆ ಸಂಭಂಧಿಸಿದಂತೆ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಇಂದು ಚಾಲನೆ ದೊರೆತಿದೆ.

ಸದರಿ ಜಮೀನಿಗೆ ಸಂಬಂಧಿಸಿದಂತೆ ಆರ್.ಟಿ.ಸಿ.ಯ ಕಾಲಂ ನಂ 9 ರಲ್ಲಿ ಖಾತೆ ಮಾಡಿಸಿದ ಸಂಬಂಧ ಸರ್ಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಿರುವ ರಿವ್ಯೂ ಅರ್ಜಿ ಅಂತಿಮ ಆದಶಕ್ಕೆ ಒಳಪಟ್ಟಿದ್ದರೂ ಕಾಮಗಾರಿ ಆರಂಭವಾಗಿರುವುದು ವಿವಾದಕ್ಕೆ ಎಡೆಮಾಡಿದೆ.

ಈ ಹಿಂದೆ ಕುರುಬಾರಹಳ್ಳಿ ಸರ್ವೆ ನಂ.4 ರ ಜಮೀನು ‘ಬಿ’ ಖರಾಬು ಎಂದು ಆರ್.ಟಿ.ಸಿ.ಯಲ್ಲಿ ಧೃಢೀಕರಣವಾಗಿತ್ತು.ಈ ಮಧ್ಯೆ ಉಚ್ಚನ್ಯಾಯಾಲಯ ಖಾತೆದಾರರ ಪರವಾಗಿ ಆದೇಶ ನೀಡಿತ್ತು. ಅಲ್ಲದೆ ಕಂಟೆಂಪ್ಟ್ ಮಾಡಿದ ವ್ಯಕ್ತಿಗಳಿಗೆ ಖಾತೆ ಮಾಡಿತ್ತು. ಆದರೂ ಪ್ರಕರಣ ಇನ್ನೂ ಬಾಕಿ ಇರುವುದು ದಾಖಲೆಗಳು ತಿಳಿಸುತ್ತದೆ.

ರಾಜಮನೆತನದ ಪ್ರಮೋದಾ ದೇವಿ ಒಡೆಯರ್ ಅವರು ಸಕ್ಷಮ ನ್ಯಾಯಾಲಯದಲ್ಲಿ ಆಕ್ಷೇಪಣೆ ಸಲ್ಲಿಸಿದ್ದಾರೆ. ಮೇಲ್ಮನವಿ ಸಲ್ಲಿಸಲು ಮೈಸೂರು ತಹಸೀಲ್ದಾರ್ ರವರು ದಿನಾಂಕ 19-8-2021 ರಂದು ಹಿಂಬರಹವನ್ನೂ ನೀಡಿದ್ದಾರೆ. ಇವೆಲ್ಲವುಗಳ ಮಧ್ಯೆ ಆರ್.ಟಿ.ಸಿ.ಕಲಂ 9 ರಲ್ಲಿ ಖಾತೆ ಮಾಡಿಸಿದ ಸಂಬಂಧ ಸರ್ಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಿರುವ ರಿವ್ಯೂ ಅರ್ಜಿ ಅಂತಿಮ ಆದೇಶಕ್ಕೆ ಒಳಪಟ್ಟಿದೆ.

ಇಂತಹ ಸಂದರ್ಭದಲ್ಲಿ ಸದರಿ ಸ್ಥಳದಲ್ಲಿ ಯಾವುದೇ ಕಾಮಗಾರಿಗಳು ನಡೆಯಬಾರದೆಂಬ ನಿಯಮಗಳಿವೆ.ಎಲ್ಲವನ್ನೂ ಗಾಳಿಗೆ ತೂರಿರುವ ಪ್ರವಾಸೋದ್ಯಮ ಇಲಾಖೆ ಲಲಿತಮಹಲ್ ಪ್ಯಾಲೇಸ್ ಪರವಾಗಿ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

key words : mysore-lalithamhal-palace-compound-work-begins-controversy