ಮೈಸೂರು ಕೆ.ಆರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಟಿ.ಎಸ್ ಶ್ರೀವತ್ಸ ಪರ ಮತಯಾಚನೆ.

ಮೈಸೂರು,ಮೇ,1,2023(www.justkannada.in): ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು ಮತದಾನದ ದಿನ ಸಮೀಪಿಸುತ್ತಿದ್ದಂತೆ ಪ್ರಚಾರದ ಭರಾಟೆ ಜೋರಾಗಿದೆ. ಈ ನಡುವೆ  ಮೈಸೂರಿನ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಟಿಎಸ್. ಶ್ರೀವತ್ಸ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷರಾದ ಡಾ. ಬಿ.ಆರ್ ನಟರಾಜ ಜೋಯಿಸ್ ರವರ ನೇತೃತ್ವದಲ್ಲಿ ಕ್ಷೇತ್ರದಲ್ಲಿ ಇಂದು ಮತಯಾಚನೆ ಮಾಡಿದರು.

ಕೆ.ಆರ್ ಕ್ಷೇತ್ರದ ವಿವೇಕಾನಂದನಗರ ವೃತ್ತದ ಗಣಪತಿ ದೇವಸ್ಥಾನದ ಬಳಿ ಮೈಸೂರು ಜಿಲ್ಲಾ ಬ್ರಾಹ್ಮಣ ಮಹಾಸಭಾದ ಜಿಲ್ಲಾಧ್ಯಕ್ಷರಾದ ಬಿ.ಆರ್.ನಟರಾಜ್ ಜೊಯಿಸ್  ಅವರ ನೇತೃತ್ವದಲ್ಲಿ ಬಿಜೆಪಿ ಅಭ್ಯರ್ಥಿ ಟಿಎಸ್ ಶ್ರೀವತ್ಸ  ಅವರು ಮೈಸೂರಿನ ಬ್ರಾಹ್ಮಣ ಸಂಘ ಸಂಸ್ಥೆಗಳ ಪಧಾದಿಕಾರಿಗಳೊಂದಿಗೆ ಮತಯಾಚಿಸಿದರು.

ಈ ವೇಳೆ ವೆಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ, ಬ್ರಾಹ್ಮಣ ಮುಖಂಡರಾದ ಕೆ.ರಘುರಾಂ ವಾಜಪೇಯಿ, ಬ್ರಾಹ್ಮಣ ಧರ್ಮ ಸಹಾಯ ಸಭಾ ಅಧ್ಯಕ್ಷ ಎಲ್. ಶ್ರೀನಿವಾಸ್, ಹಿರಿಯ ವಕೀಲರಾದ ರವೀಂದ್ರ, ಬೊಬ್ಬರಕಮ್ಮೆ ಬ್ರಾಹ್ಮಣ ಸಂಘದ ಅಧ್ಯಕ್ಷ ಸೂರ್ಯನಾರಯಣ್, ಬಿಇಎಂಎಲ್ ಬ್ರಾಹ್ಮಣ ಸಂಘದ ಅಧ್ಯಕ್ಷ ಗಣೇಶ್ ಕುರ್ಕಿ, ಬ್ರಾಹ್ಮಣ ಮುಖಂಡರಾದ ಆರ್ ಸತ್ಯನಾರಾಯಣ, ಡಾ.ಲಕ್ಷ್ಮೀ ದೇವಿ, ವಿಜಯಲಕ್ಷ್ಮಿ, ಸುರೇಶ್, ವಿಶ್ವನಾಥ್, ವಿನಯ್,  ಅನಂತಪ್ರಸಾದ್, ಇನ್ನಿತರರು ಉಪಸ್ಥಿತರಿದ್ದರು.

Key words: Mysore -KR Constituency- BJP candidate- TS Srivatsa