ದೇಶದ ಒಳಿತಿಗಾಗಿ ಉಗ್ರರ ವಿರುದ್ಧ ಕಠಿಣ ಕ್ರಮ ಜರುಗಿಸಿ: ಇದಕ್ಕೆ ಕಾಂಗ್ರೆಸ್ ನ ಯಾವುದೇ ಆಕ್ಷೇಪ ಇಲ್ಲ- ಆರ್.ಧೃವನಾರಾಯಣ್.

ಮೈಸೂರು,ಸೆಪ್ಟಂಬರ್,21,2022(www.justkannada.in): ದೇಶದ ಒಳಿತಿಗಾಗಿ ಉಗ್ರರ ವಿರುದ್ಧ ಕಠಿಣ ಕ್ರಮ ಜರುಗಿಸಿ. ಸರ್ಕಾರ ಅಂಥವರ ಮೇಲೆ ಉಗ್ರ ಶಿಕ್ಷೆಯ ಕ್ರಮ ತೆಗೆದುಕೊಳ್ಳಬೇಕು.  ಇದಕ್ಕೆ ಕಾಂಗ್ರೆಸ್ ನ ಯಾವುದೇ ಆಕ್ಷೇಪ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ  ಆರ್.ಧೃವನಾರಾಯಣ್ ನುಡಿದರು.

ಮೈಸೂರಿನಲ್ಲಿ ಮಾತನಾಡಿದ ಆರ್.  ಧ್ರುವನಾರಾಯಣ್ , ಐಸಿಸ್ ಉಗ್ರರ ಜತೆ ಯಾರು ಸಂಬಂಧ ಬೆಳೆಸುತ್ತಾರೆ ಅಂಥವರ ಮೇಲೆ ಉಗ್ರ ಕ್ರಮ ಜರುಗಿಸಬೇಕು. ನಮ್ಮ ಸರ್ಕಾರದ ಗುಪ್ತ ಇಲಾಖೆ ಚುರುಗುಗೊಳ್ಳಬೇಕು ಎಂದರು.

ಮೀಸಲಾತಿ ವಿಚಾರವಾಗಿ ಆರ್ಥಿಕ ಸಬಲರಾದವರಿಗೆ ಮೀಸಲಾತಿ ರದ್ದು ಪಡಿಸಬೇಕು ಎಂದು ಹೇಳಿದ್ದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಆರ್.ದೃವನಾರಾಯಣ್, ಈಶ್ವರಪ್ಪ ಒಬ್ಬ ದಡ್ಡರು ಅವರಿಗೆ ಏನು ಮಾತನಾಡುತ್ತೇನೆ ಏನು ಅಂಥ ಅವರಿಗೆ ಗೊತ್ತಾಗೊಲ್ಲ ಎಂದು ಕಿಡಿಕಾರಿದರು.

ಕೇಂದ್ರ  ಸಚಿವ ಪ್ರಹ್ಲಾದ್ ಜೋಷಿ ಅವರು ಇತ್ತೀಚಿಗೆ ಮೈಸೂರಿಗೆ ಬಂದಿದ್ದಾಗ ಕಾಂಗ್ರೆಸ್  ಮತ್ತು ಗಾಂಧಿ ಕುಟುಂಬದ ಬಗ್ಗೆ ಬೇಜವಾಬ್ದಾರಿಯಾಗಿ ಮಾತನಾಡಿದ್ದಾರೆ. ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಈ ರೀತಿ ಮಾತನಾಡಬಾರದು ಎಂದು ಪ್ರಹ್ಲಾದ್ ಜೋಶಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿಗೆ ಭಯ ಆರಂಭವಾಗಿದೆ. ಬಿಜೆಪಿ ಜನರಿಗೆ ಸುಳ್ಳು ಹೇಳಿ ಹೇಳಿ ಜನರಿಗೆ ನಿರಾಸೆ ಉಂಟುಮಾಡಿದ್ದಾರೆ. ಜನರಿಗೆ ಭ್ರಮ ಹುಟ್ಟಿಸಿದವರು ಬಿಜೆಪಿಯವರು. ಉದ್ಯೋಗ ಸೃಷ್ಟಿಯ ಆಶ್ವಾಸನೆ,  ಡಾಲರ್ ಮತ್ತು ರೂಪಾಯಿ ಬೆಲೆ ೧೫ ರೂಪಾಯಿಗೆ ಸಮ ಮಾಡುತ್ತೇವೆ ಎಂದಿದ್ದರು. ಈಗ 1 ಡಾಲರ್ ಬೆಲೆ ರೂಪಾಯಿ  80 ರೂ ಆಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಗಗನಕ್ಕೇರಿದೆ. ಮೊದಲು ಈ ಸಮಸ್ಯೆಗಳನ್ನು ಸರಿಪಡಿಸಿ  ಅದನ್ನು ಬಿಟ್ಟು  ಗಾಂಧಿ ಕುಟುಂಬದ ಬಗ್ಗೆ ಟೀಕಿಸುವುದನ್ನ ಬಿಡಿ ಎಂದು ಹರಿಹಾಯ್ದರು.

ಭಾರತ್ ಜೋಡೋ ಯಾತ್ರೆ ಒಂದು ರಾಜಕೀಯ ಉದ್ದೇಶಕ್ಕಾಗಿ ಮಾಡುವ ಪಾದಯಾತ್ರೆ ಅಲ್ಲ. ದೇಶದಲ್ಲಿ ಇರುವ ಅಶಾಂತಿಯನ್ನ ಹೋಗಲಾಡಿಸಿ ಶಾಂತಿಯನ್ನು ನೆಲಸುವ ದಿಕ್ಕಿನಲ್ಲಿ ಮಾಡುವ ಪಾದಯಾತ್ರೆ ಇದು. ಇದರಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಕೂಡ ಭಾಗವಹಿಸಿದ್ದರು, ಕೇರಳಾದ ಬೇರೆ ಪಕ್ಷದ ಮುಖಂಡರೂ ಕೂಡ ಭಾಗವಹಿಸಿದ್ದರು ಇದನ್ನು ರಾಜಕೀಯ ಉದ್ದೇಶದಿಂದ ಮಾಡುತ್ತಿಲ್ಲ. ಕುವೆಂಪು ಅವರು ಹೇಳಿದ ಹಾಗೆ ಸರ್ವಜನಾಂಗದ ಶಾಂತಿಯ ತೋಟ ಮಾಡಲು ಮಾಡುವಂತ ಪಾದಯಾತ್ರೆ ಇದು ಎಂದು ದೃವನಾರಾಯಣ್ ತಿಳಿಸಿದರು.

Key words: mysore-kpcc-work president-R.Dhruvanarayan