ಹೆಚ್.ಡಿ ಕುಮಾರಸ್ವಾಮಿ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ ಸಂಸದ ಪ್ರತಾಪ್ ಸಿಂಹ…

ಮೈಸೂರು,ಜೂ,6,2019(www.justkannada.in): ಮೈಸೂರು- ಬೆಂಗಳೂರು ನಡುವೆ ವಿಮಾನ ಹಾರಾಟಕ್ಕೆ ಇಂದು ಹಸಿರು ನಿಶಾನೆ ತೋರಲಾಗಿದ್ದು ಈ ನಡುವೆ ವಿಮಾನ ನಿಲ್ದಾಣ ಅಭಿವೃದ್ಧಿಗೆ 280 ಎಕರೆ ಭೂಮಿ ಸ್ವಾದೀನ‌ ಮಾಡಿದ್ದಕ್ಕೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೆಚ್.ಡಿ ಕುಮಾರಸ್ವಾಮಿ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ಉಡಾನ್-3 ಯೋಜನೆಯ ಎರಡನೇ ವಿಮಾನಕ್ಕೆ ಇಂದು ಮೈಸೂರಿನಲ್ಲಿ ಸಚಿವ ಜಿ.ಟಿ ದೇವೇಗೌಡ ಮತ್ತು ಸಂಸದ ಪ್ರತಾಪ್ ಸಿಂಹ ಚಾಲನೆ ನೀಡಿದರು.  ಬಳಿಕ ಮಾತನಾಡಿದ ಸಂಸದ ಪ್ರತಾಪ್ ಸಿಂಹ,  ವಿಮಾನ ನಿಲ್ದಾಣ ಅಭಿವೃದ್ಧಿ ಗೆ 280 ಎಕರೆ ಭೂಮಿ ಸ್ವಾದೀನ‌ ಮಾಡಿದ್ದಕ್ಕೆ  ಹೆಚ್.ಡಿ ಕುಮಾರಸ್ವಾಮಿ ಸರ್ಕಾರಕ್ಕೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಪ್ರವಾಸೋದ್ಯಮ ಸಚಿವರಿಗೂ ಧನ್ಯವಾದ ಅರ್ಪಿಸುತ್ತೇನೆ. ನಾನು ಲೋಕ ಸದಸ್ಯನಾದಾಗ ಮೈಸೂರಲ್ಲಿ ವಿಮಾನ ನಿಲ್ದಾಣ ಇತ್ತು ಆದರೆ ವಿಮಾನಗಳೆ ಬರ್ತಾ ಇರಲಿಲ್ಲ. ಮೋದಿಯವರು ಇಂತಹ ನಗರಗಳಿಗೂ ವಿಮಾನ ಸೇವೆ ಕೊಡಬೇಕು ಎನ್ನುವ ಉದ್ದೇಶದಿಂದ ಉಡಾನ್ ಯೋಜನೆ ತಂದಿದ್ದಾರೆ. ಇದಕ್ಕೆ ಒಂದು ಪುನಶ್ಚೇತನ ನೀಡಲಾಗಿದೆ. ಬ್ಯಾಂಡ್ ನ್ಯೂ ಏರ್ಪೋರ್ಟ್ ನಿರ್ಮಾಣ ಮಾಡಲು ಹಾಗೂ ರನ್ ವೇ ವಿಸ್ತರಿಸಲು ಶೀಘ್ರದಲ್ಲೇ ಕ್ರಮವಹಿಸಲಾಗುವುದು ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಸಚಿವ ಜಿ.ಟಿ ದೇವೇಗೌಡ, ಉಡಾನ್ ಯೋಜನೆಯ ಅಡಿಯಲ್ಲಿ ಎರಡನೇ ವಿಮಾನಕ್ಕೆ ಚಾಲನೆ ನೀಡಲಾಗಿದೆ. ಮೊದಲು ಈಗಾಗಲೇ ಮೈಸೂರು ಟು ಹೈದರಾಬಾದ್ ವಿಮಾನ ಸೇವೆ ಒದಗಿಸಲಾಗಿದೆ. ಇಂದು ಮೈಸೂರು ಟು ಬೆಂಗಳೂರು ಎರಡನೇ ಸೇವೆಗೆ ಚಾಲನೆ ನೀಡಲಾಗಿದೆ. 32 ಜನ ಮೊದಲ ದಿನವೇ ಪ್ರಯಾಣ ಮಾಡುತ್ತಿದ್ದಾರೆ. ಪ್ರಯಾಣ ದರ 1500 ನಿಗದಿಗೊಳಿಸಲಾಗಿದೆ. ಜುಲೈ ಮೊದಲ ವಾರದಲ್ಲಿ ಉಳಿದ ಮೂರು ವಿಮಾನಗಳು ಕಾರ್ಯರಂಭ ಮಾಡಲಿವೆ ಎಂದು ಮಾಹಿತಿ ನೀಡಿದರು.

ಏರ್ ಪೋರ್ಟ್ ವಿಸ್ತರಣೆಗೆ 280 ಎಕರೆ ಭೂ ಸ್ವಾಧಿನ ಮಾಡಲಾಗಿದೆ. ಕೈಗಾರಿಕಾ ಇಲಾಖೆಗೆ ನೀಡಿದ್ದೇವೆ. ಇನ್ನು ವಿಮಾನ‌ ಪ್ರಾಧಿಕಾರಕ್ಕೆ ಭೂಮಿ ಹಸ್ತಾಂತರ ಮಾಡಬೇಕಿದೆ. ನಂತರ ಅಭಿವೃದ್ದಿಗೆ 700 ಕೋಟಿ ರೂಗಳನ್ನು ಮೀಸಲಿಡಲಾಗಿದ್ದು, ಪ್ರವಾಸೋದ್ಯಮ ಅಭಿವೃದ್ಧಿ ಗೆ ಪೂರವಾಗಲಿದೆ. ವಿಮಾನ ಸೌಕರ್ಯದ ಕೊರತೆ ನೀಗಿದ್ದು, ಪ್ರಯಾಣಿಕರು ಈ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಸಚಿವ ಜಿ.ಟಿ ದೇವೇಗೌಡ ಹೇಳಿದರು.

ಇನ್ನು ವಿಮಾನ‌ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ನಾಮಕರಣ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಜಿ.ಟಿ ದೇವೇಗೌಡ, ಈ ಬಗ್ಗೆ ಮುಂದಿನ ದಿನಗಳಲ್ಲಿ ಸರ್ಕಾರದೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುಲಾಗುವುದು ಎಂದು ಹೇಳಿದರು.

Key words: mysore-kodagu  MP Pratap Simha, who thanked the HD Kumaraswamy government

#mysore #MPPratapSimha #thanked #HDKumaraswamy #government