Friday, August 7, 2026

BDA Apartments

Home Front Page ‘ನಮ್ಮ ಅನ್ನದ ತಟ್ಟೆಗೆ ಕೈ ಹಾಕಿದ್ರೆ ಕೈ ಕತ್ತರಿಸುತ್ತೇವೆ’- ಪಂಚಮಸಾಲಿ ಹೋರಾಟಕ್ಕೆ ಕೆ.ಎಸ್ ಶಿವರಾಮು ಕಿಡಿ

‘ನಮ್ಮ ಅನ್ನದ ತಟ್ಟೆಗೆ ಕೈ ಹಾಕಿದ್ರೆ ಕೈ ಕತ್ತರಿಸುತ್ತೇವೆ’- ಪಂಚಮಸಾಲಿ ಹೋರಾಟಕ್ಕೆ ಕೆ.ಎಸ್ ಶಿವರಾಮು ಕಿಡಿ

ಮೈಸೂರು,ಡಿಸೆಂಬರ್,14,2024 (www.justkannada.in): 2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮುದಾಯ ನಡೆಸುತ್ತಿರುವ ಹೋರಾಟಕ್ಕೆ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ ಎಸ್ ಶಿವರಾಮು ಕಿಡಿ ಕಾರಿದ್ದಾರೆ.

ಜಯಮೃತ್ಯುಂಜಯ ಸ್ವಾಮಿಜಿ ಹೋರಾಟವನ್ನ ಖಂಡಿಸುತ್ತಿದ್ದೇವೆ. ನಮ್ಮ ಅನ್ನದ ತಟ್ಟೆಗೆ ಕೈ ಹಾಕಿದ್ರೆ ಕೈ ಕತ್ತರಿಸುತ್ತೇವೆ ಎಂದು  ಜಯಮೃತ್ಯುಂಜಯ ಸ್ವಾಮೀಜಿಗೆ  ಕೆ.ಎಸ್ ಶಿವರಾಮು ಎಚ್ಚರಿಕೆ ನೀಡಿದ್ದಾರೆ.

ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟ ವಿಚಾರ ಸಂಬಂಧ ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ. ಎಸ್ ಶಿವರಾಮ್ ಅಧ್ಯಕ್ಷತೆಯಲ್ಲಿ ಮೈಸೂರಿನಲ್ಲಿ ಹಿಂದುಳಿದ ಸಮುದಾಯಗಳಿಂದ ದುಂಡುಮೇಜಿನ ಸಭೆ ನಡೆಯಿತು. ಪಂಚಮಸಾಲಿ ಸಮುದಾಯವನ್ನ ಪ್ರವರ್ಗ 2A ಗೆ ಸೇರಿಸಬಾರದು ಎಂದು ಸಭೆಯಲ್ಲಿ ಒತ್ತಾಯ ಮಾಡಲಾಯಿತು. ಸಭೆಯಲ್ಲಿ ಹಿಂದುಳಿದ ಸಮುದಾಯದ ಹಲವು ಮುಖಂಡರು ಭಾಗಿಯಾಗಿದ್ದರು.

ಒಂದು ಜಾತಿ ಪರವಾಗಿ ಕೆಲಸ ಮಾಡುವವರು ಸ್ವಾಮೀಜಿಯಾಗಲು ನಾಲಾಯಕ್.

ಸಭೆ ಬಳಿಕ ಮಾತನಾಡಿ ಜಯಮೃತ್ಯುಂಜಯಸ್ವಾಮೀಜಿ ವಿರುದ್ದ ಗುಡುಗಿದ ಕೆ.ಎಸ್ ಶಿವರಾಮ್, ಸ್ವಾಮೀಜಿ ರಾಜಕೀಯ ಪುಡಾರಿ ರೀತಿ ನಡೆದುಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಬಗ್ಗೆ ಅವಹೇಳನಾವಾಗಿ ಮಾತಾನಾಡಿದ್ದಾರೆ. ನೀವು ಸನ್ಯಾಸಿಯಾಗಿ ಒಂದು ಜಾತಿ ಪರವಾಗಿ ಕೆಲಸ ಮಾಡುವವರು ಸ್ವಾಮೀಜಿಯಾಗಲು ನಾಲಾಯಕ್. ಕಾವಿ ಬಟ್ಟೆ ಬಿಚ್ವಿಟ್ಟು ಬನ್ನಿ. ಕಾವಿ ಬಟ್ಟೆಗೆ ನಾವು ಗೌರವ ಕೊಡುತ್ತಿದ್ದೇವೆ ಅದನ್ನ ಉಳಿಸಿಕೊಳ್ಳಿ ಎಂದು ಟಾಂಗ್ ಕೊಟ್ಟರು.

ಸ್ವಾಮೀಜಿಯಾಗಿ ಹಿಂಸಾಚಾರಕ್ಕೆ ಕುಮ್ಮಕ್ಕು

ಈ ವಿಚಾರ ಸುಪ್ರೀಂ ಕೋರ್ಟ್ ನಲ್ಲಿ ಇದೆ. ಸ್ವಾಮೀಜಿಯಾಗಿ ಹಿಂಸಾಚಾರಕ್ಕೆ ಕುಮ್ಮಕ್ಕು ಕೊಡ್ತಾ ಇದೀರಿ. ಇದೇನಾ ನಿಮ್ಮ ರೀತಿ ನೀತಿ. ಹಿಂದುಳಿದ ವರ್ಗಗಳು ವೀರಶೈವರು, ಲಿಂಗಾಯತರು ಒಂದಾಗಿ ಇದ್ದೀವಿ. ನಮ್ಮಗಳ ಮಧ್ಯೆ ಜಗಳ ತಂದು ಹಾಕ್ತಾ ಇದೀರಿ. ಜಯ ಮೃತ್ಯುಂಜಯ ಸ್ವಾಮಿ ಬಿಜೆಪಿ ಏಜೆಂಟ್ ರೀತಿ ಕೆಲಸ ಮಾಡುತ್ತಿದ್ದಾರೆ.  ಸಿದ್ದರಾಮಯ್ಯರನ್ನು ಕೆಳಗಿಳಿಸಲು ಸುಫಾರಿ ಪಡೆದುಕೊಂಡಿದ್ದಾರೆ. ನಮ್ಮ ಅನ್ನದ ತಟ್ಟೆಗೆ ಕೈ ಹಾಕಿದ್ರೆ ಕೈ ಕತ್ತರಿಸುತ್ತೇವೆ ಎಂದು ಕೆ ಎಸ್ ಶಿವರಾಮು ವಾಗ್ದಾಳಿ ನಡೆಸಿದರು.

Key words: mysore, K.S. Shivaramu, Against, Panchamasali protest