ಮೈಸೂರು,ಜುಲೈ,9,2025 (www.justkannada.in): ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಳವಾಗುತ್ತಿರುವುದಕ್ಕೆ ಆತಂಕಕ್ಕೊಳಗಾದ ಜನರು ಮೈಸೂರಿನ ಜಯದೇವ ಆಸ್ಪತ್ರೆಗೆ ಲಗ್ಗೆ ಇಡುತ್ತಿದ್ದು ರೋಗಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ನೂಕು ನುಗ್ಗಲು ಉಂಟಾಗಿತ್ತು. ಇದೀಗ ಪೊಲೀಸರು ನೂಕು ನುಗ್ಗಲಿಗೆ ಬ್ರೇಕ್ ಹಾಕಿದ್ದಾರೆ.
ರಾಜ್ಯದಲ್ಲಿ ಹೃದಯಾಘಾತ ಪ್ರಕರಣ ಹೆಚ್ಚಿದ ಹಿನ್ನಲೆಯಲ್ಲಿ ಭೀತಿಗೊಳಗಾದ ಜನತೆ ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಮುಂಜಾನೆಯೇ ಬಂದು ಕ್ಯೂ ನಿಲ್ಲುತ್ತಿದ್ದರು. ಪ್ರತಿನಿತ್ಯ ಹೊರಗಡೆ ಜಿಲ್ಲೆಗಳಿಂದ ನೂರಾರು ಜನರು ಜಯದೇವ ಆಸ್ಪತ್ರೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯ ಕಾರಿಡಾರ್, ಒಳ, ಹೊರ ಆವರಣ ಜನರಿಂದ ತುಂಬಿ ತುಳುಕುತ್ತಿದ್ದು ನೂಕು ನುಗ್ಗಲು ಉಂಟಾಗುತ್ತಿತ್ತು.
ನಿನ್ನೆ ಉಂಟಾಗಿದ್ದ ನೂಕು- ನುಗ್ಗಲು ಕುರಿತು JUSTKANNADA.IN ವರದಿ ಬಿತ್ತರಿಸಿತ್ತು. ಇದೀಗ Justkannada.in ವರದಿ ಬಳಿಕ ಎಚ್ಚೆತ್ತ ಪೊಲೀಸರು ನೂಕು ನುಗ್ಗಲಿಗೆ ಬ್ರೇಕ್ ಹಾಕಿ ರೋಗಿಗಳನ್ನ ಸರತಿ ಸಾಲಿನಲ್ಲಿ ನಿಲ್ಲಿಸಿದ್ದಾರೆ. ವಿವಿಪುರಂ ಠಾಣಾ ಪೊಲೀಸರು ಆಸ್ಪತ್ರೆಯಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದು ರೋಗಿಗಳಿಗೆ ಟೋಕನ್ ನೀಡಿ ಆರ್ಡರ್ ಪ್ರಕಾರ ಬಿಡುತ್ತಿದ್ದಾರೆ.
Key words: Mysore, Jayadeva Hospital, Heart attack, Police