ಅಕ್ರಮ ಸಂಬಂಧಕ್ಕೆ ಅಡ್ಡಿ: ಪ್ರಿಯಕರನ ಜತೆ ಸೇರಿ  ಪತಿಯನ್ನೇ ಮುಗಿಸಿದ ಪತ್ನಿ…

ಮೈಸೂರು,ಜೂ,27,2020(www.justkannada.in): ಕುಡಿದು ಬಂದು ಕಿರುಕುಳ  ನೀಡುತ್ತಿದ್ದ ಪತಿಯನ್ನ ಪ್ರಿಯಕರನ  ಜತೆ ಸೇರಿ ಪತ್ನಿ ಕೊಲೆ ಮಾಡಿಸಿದ ಘಟನೆ ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲ್ಲೂಕಿನಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕು ಸಾಲಿಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಾರದ ಮತ್ತು ಪ್ರಿಯಕರ ಬಾಬುವನ್ನ ಪೊಲೀಸರು ಬಂಧಿಸಿದ್ದಾರೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿ ಆನಂದ್ ನನ್ನ ಪತ್ನಿ ಶಾರದಾ ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿಸಿದ್ದಳು.

ಜೂನ್ 23 ರಂದು ಸಾಲಿಗ್ರಾಮದ ಚುಂಚನಕಟ್ಟೆ ಮುಖ್ಯ ರಸ್ತೆ ಬಳಿ ಆನಂದನ ಮೃತ ದೇಹ ಪತ್ತೆಯಾಗಿತ್ತು. ಅಪಘಾತದಲ್ಲಿ ಮೃತಪಟ್ಟಂತೆ ಸನ್ನಿವೇಶ ಸೃಷ್ಟಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಸಾಲಿಗ್ರಾಮ ಪೊಲೀಸರು  ಪತ್ನಿ ಶಾರದಾಳನ್ನ ವಿಚಾರಣೆಗೆ ಒಳಪಡಿಸಿದಾಗ ಸಂಚು ಬಯಲಾಗಿದೆ.mysore-illicit-relationship-wife-murder-husband-lover

ಹಲವು ದಿನಗಳಿಂದ ಪ್ರಿಯಕರ ಬಾಬು ಜೊತೆ ಶಾರದಾ ಅಕ್ರಮ ಸಂಭಂದ ಇಟ್ಟುಕೊಂಡಿದ್ದಳು. ಆದರೆ ಇವರ ಅಕ್ರಮ ಸಂಬಂಧಕ್ಕೆ ಪತಿ ಆನಂದ್ ಅಡ್ಡಿಯಾಗಿದ್ದ . ಅದ್ದರಿಂದ ಶಾರದಾ ಪತಿಯನ್ನ ಮುಗಿಸಲು  ಸ್ಕೆಚ್ ಹಾಕಿದ್ದಳು. ಇದಕ್ಕಾಗಿ ಆಕೆ ಪ್ರಿಯಕರನ ಮೊರೆ ಹೋಗಿದ್ದಳು.

ಈ ವೇಳೆ ದೃಶ್ಯಂ ಸಿನಿಮಾ ಪ್ರೇರಣೆಯಿಂದ ಇಬ್ಬರು ಆರೋಪಿಗಳು ಪ್ಲಾನ್ ಸಿದ್ದಪಡಿಸಿ ಆ ಪ್ಲಾನ್ ನಂತೆ ಆನಂದ್ ನ ಕೊಲೆ ಮಾಡಿ ಮೃತದೇಹವನ್ನ ರಸ್ತೆ ಬದಿ ಬಿಸಾಡಿದ್ದರು. ಬಳಿಕ ಅಪಘಾತದಲ್ಲಿ ಮೃತಪಟ್ಟಂತೆ ಸನ್ನಿವೇಶ ಸೃಷ್ಟಿಸಿದ್ದರು. ಇದೀಗ ಶಾರದ ಪ್ರಿಯಕರ ಬಾಬುವಿನ ಸಂಚು ಬಯಲಾಗಿದ್ದು ಸದ್ಯ ಇಬ್ಬರು ಆರೋಪಿಗಳು ಪೊಲೀಸರ ಅತಿಥಿಯಾಗಿದ್ದಾರೆ.

Key words: mysore- illicit relationship-Wife –murder- husband – lover.