ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ…

ಮೈಸೂರು,ಜ,20,2020(www.justkannada.in):  ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ ನಡೆಸಿದ್ದು ಸದ್ಯ ರೈತ ಅಪಾಯದಿಂದ ಪಾರಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಮನುಗನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ರೈತ ರವಿ ಎಂಬುವವರ ಮೇಲೆಯೇ ಕಾಡಾನೆ ದಾಳಿ ನಡೆಸಿರುವುದು. ರವಿ ಸದ್ಯ ಅಪಾಯದಿಂದ ಪಾರಾಗಿದ್ದಾರೆ. ಇನ್ನು ಕಾಡಾನೆ ದಾಳಿಯಿಂದ ರವಿ ಅವರ ದ್ವಿಚಕ್ರವಾಹನ ಜಖಂ ಆಗಿದೆ.

ಇನ್ನೊಂದೆಡೆ ಹುಣಸೂರು ತಾಲ್ಲೂಕಿನ ಕಾಳಬೋಚನಹಳ್ಳಿಯಲ್ಲೂ ಸಹ ಒಂಟಿಸಲಗ ದಾಳಿ ಮುಂದುವರೆದಿದೆ. ಕಾಳಬೋಚನಹಳ್ಳಿ ಗ್ರಾಮಕ್ಕೆ ಕಾಡಾನೆ ದಾಳಿ ನಡೆಸಿ ಗ್ರಾಮದಲ್ಲಿ ಅಡ್ಡಾದಿಡ್ಡಿ ಓಡಾಡಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಆನೆ ಬಂದಿದೆ ಎಂದು ಹೇಳಲಾಗುತ್ತಿದೆ. ಕಾಡಾನೆ ದಾಳಿಗೆ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

Key words:  mysore- hunsur-elephant-attack- farmer-bike