ಕಾಡಾನೆಗಳ ಹಾವಳಿಯಿಂದ ಬೆಳೆಗಳು ನಾಶ: ರೈತರಿಗೆ ಲಕ್ಷಾಂತರ ರೂ. ನಷ್ಟ…

ಮೈಸೂರು,ಸೆಪ್ಟಂಬರ್,16,2020( www.justkannada.in): ಕಾಡಾನೆಗಳ ದಾಳಿಯಿಂದಾಗಿ ರೈತರು ಬೆಳೆದ ಬೆಳೆಗಳು ನಾಶವಾಗಿರುವ ಘಟನೆ ಮೈಸೂರು ಜಿಲ್ಲೆ ಎಚ್.ಡಿ ಕೋಟೆ ತಾಲ್ಲೂಕಿನಲ್ಲಿ ನಡೆದಿದೆ.jk-logo-justkannada-logo

ಎಚ್ .ಡಿ ಕೋಟೆ ತಾಲೂಕಿ‌ನ ಕಲ್ಲಹಳ್ಳ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆ ಕಾಟ ಹೆಚ್ಚಾಗಿದೆ. ಅರಣ್ಯವ್ಯಾಪ್ತಿಯ ಮೊಳೆಯೂರು ವಲಯ ಕಾಡಂಚಿನ ಈ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿಯಿಂದಾಗಿ ಬಾಳೆ, ನವಣೆ ಹಾಗೂ ತರಕಾರಿ ಬೆಳೆಗಳು ನಾಶವಾಗಿವೆ. ಬೆಳೆಯಷ್ಟೆ ಅಲ್ಲ ರೈತರ ಪಂಪಸೆಟ್, ತಂತಿ ಬೇಲಿ ತುಳಿದು ಕಾಡಾನೆಗಳು ದಾಂಧಲೆ ನಡೆಸಿದ್ದು ಇದರಿಂದಾಗಿ ರೈತರು ಲಕ್ಷಾಂತರ ರೂ ನಷ್ಟ ಅನುವಭವಿಸಿದ್ದಾರೆ.

ಸ್ಥಳಕ್ಕೆ ಎಸಿಎಫ್ ರವಿಕುಮಾರ್, ಆರ್ ಎಫ್ ಒ ಪುಟ್ಟರಾಜು ಭೇಟಿ ನೀಡಿ ಪರಿಶೀಲಿಸಿದ್ದು, ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳ ವಾಹನ ತಡೆದು ರೈತರು ಪ್ರತಿಭಟನೆ ನಡೆಸಿ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದರು. ರಾತ್ರಿ ಕಾವಲುಗಾರರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲವೆಂದು  ರೈತರು ಆರೋಪಿಸಿದರು. ಇದೇ ವೇಳೆ ರೈತರಿಗೆ ಎಸಿಎಫ್ ರವಿಕುಮಾರ್ ಸೂಕ್ತ ಪರಿಹಾರ ನೀಡುವ ಭರವಸೆ ಕೊಟ್ಟಿದ್ದಾರೆ.

Key words: mysore- hd kote- elephant-farmer- crop