Saturday, September 19, 2026

BDA Apartments

ಕ್ರೈಸ್ತ ಧರ್ಮಕ್ಕೆ ಮತಾಂತರವಾಗಲು ಬಲವಂತ : ಸಹೋದರನ ವಿರುದ್ದವೇ ಅಣ್ಣನ ಆರೋಪ BD...
Home Crime ಕ್ರೈಸ್ತ ಧರ್ಮಕ್ಕೆ ಮತಾಂತರವಾಗಲು ಬಲವಂತ : ಸಹೋದರನ ವಿರುದ್ದವೇ ಅಣ್ಣನ ಆರೋಪ.

ಕ್ರೈಸ್ತ ಧರ್ಮಕ್ಕೆ ಮತಾಂತರವಾಗಲು ಬಲವಂತ : ಸಹೋದರನ ವಿರುದ್ದವೇ ಅಣ್ಣನ ಆರೋಪ.

Mysore-h.d.kote-police-crime-conversion-Christianity-allegation

 

ಮೈಸೂರು, ಜ.06, 2022 : (www.justkannada.in news) : ಕ್ರೈಸ್ಥ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸಿ ಮಾರಣಾಂತಿಕ ಹಲ್ಲೆ ಆರೋಪ. ಅದು ಸಹೋದರನಿಂದಲೇ ಅಣ್ಣನ‌ ಕುಟುಂಬದ ಮೇಲೆ ತೀವ್ರ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.

ಹೆಚ್ ಡಿ‌ಕೋಟೆ ತಾಲೂಕಿನ ಟೈಗರ್ ಬ್ಲಾಕ್ ಗ್ರಾಮದಲ್ಲಿ ನಡೆದಿರುವ ಘಟನೆ. ಸಹೋದರ ಮನೋಹರ್ ವಿರುದ್ದ ಅಣ್ಣ ಯದುನಂದನ್ ಗಂಭೀರ ಆರೋಪ.

ಮೈಸೂರು ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಯದುನಂದನ್, ಪತ್ನಿ, ಮಗಳು ಹಾಗೂ ಅಳಿಯನ ಜೊತೆಗೂಡಿ ಸುದ್ದಿಗೋಷ್ಠಿ ನಡೆಸಿ ಕಣ್ಣೀರಿಟ್ಟು ಹೇಳಿದಿಷ್ಟು…

ನನ್ನ ತಮ್ಮ ಮನೋಹರ್ ಇಪ್ಪತ್ತು ವರ್ಷದ ಹಿಂದೆ ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದಾರೆ. ನಮಗೆ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗುವಂತೆ ಕಿರುಕುಳ ನೀಡುತ್ತಿದ್ದಾರೆ. ನಾವು ಒಪ್ಪದ ಕಾರಣ ಡಿಸೆಂಬರ್ 30ರಂದು ಹಲ್ಲೆ ನಡೆಸಿದ್ದಾನೆ. ಕಳೆದ ಒಂದು ವಾರದ ಹಿಂದೆ ನಡೆದಿರುವ ಘಟನೆ. ಏಳು ಮಂದಿ ಮೇಲೆ ಹೆಚ್ ಡಿ‌ ಕೋಟೆ ಪೋಲಿಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲು. ಇದೀಗ ಠಾಣೆಯಲ್ಲಿ‌ ಕೇಸ್ ದಾಖಲಾಗಿ ಪ್ರಗತಿ ಹಂತದಲ್ಲಿದೆ.

ನಮ್ಮ ಕುಟುಂಬಕ್ಕೆ ಜೀವ ಭಯ ಇದೆ. ನಮಗೆ ಪೋಲಿಸರು ರಕ್ಷಣೆ ನೀಡಬೇಕು. ಪತ್ರಕರ್ತರ ಭವನದಲ್ಲಿ ಅಳಲು‌ ತೋಡಿಕೊಂಡ ಯದುನಂದನ್.

ಕ್ರೈಸ್ತ ಧರ್ಮಕ್ಕೆ ಮತಾಂತರವಾಗಲು ಬಲವಂತ yadunandan-mys yadunandan mys

key words : Mysore-h.d.kote-police-crime-conversion-Christianity-allegation