Thursday, August 20, 2026

BDA Apartments

Home Front Page ಜಿಟಿ ದೇವೇಗೌಡರನ್ನ ಜೆಡಿಎಸ್ ಪಕ್ಷದಿಂದ ಉಚ್ಚಾಟಿಸಿ- ಮಾಜಿ ಸಚಿವ ಜಿಟಿಡಿ ಆಪ್ತನಿಂದಲೇ ಒತ್ತಾಯ…

ಜಿಟಿ ದೇವೇಗೌಡರನ್ನ ಜೆಡಿಎಸ್ ಪಕ್ಷದಿಂದ ಉಚ್ಚಾಟಿಸಿ- ಮಾಜಿ ಸಚಿವ ಜಿಟಿಡಿ ಆಪ್ತನಿಂದಲೇ ಒತ್ತಾಯ…

ಮೈಸೂರು,ಜ,22,2020(www.justkannada.in): ಮಾಜಿ ಸಚಿವ ಜಿಟಿ ದೇವೇಗೌಡರನ್ನ “ಜೆಡಿಎಸ್ ಪಕ್ಷದಿಂದ ಉಚ್ಚಾಟಿಸಿ” ಎಂದು ಹೆಚ್ ಡಿ ಕುಮಾರಸ್ವಾಮಿಗೆ ಜಿಟಿ ದೇವೇಗೌಡರ‌ ಆಪ್ತರೇ ಆದ ಬೆಳವಾಡಿ ಗ್ರಾ.ಪಂ‌ ಮಾಜಿ ಅಧ್ಯಕ್ಷ ಬೆಳವಾಡಿ ಶಿವಮೂರ್ತಿ  ಒತ್ತಾಯ ಮಾಡಿದ್ದಾರೆ.

ಜಿಟಿ ದೇವೇಗೌಡ ಪರಮಾಪ್ತನೆಂದೇ ಕರೆಸಿಕೊಳ್ಖುತ್ತಿದ್ದ ಬೆಳವಾಡಿ ಶಿವಮೂರ್ತಿ ಅವರೇ ಜಿ.ಟಿ ದೇವೇಗೌಡರನ್ನ ಉಚ್ಚಾಟನೆ ಮಾಡುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಶಿವಮೂರ್ತಿ,  ಕೆಟಿ ಚೆಲುವೇಗೌಡ ಇಂತಹವರ ರಾಜೀನಾಮೆ ಕೇಳಿರುವುದು ಸರಿ. ನಾವು ಕೂಡ ರಾಜೀನಾಮೆಗೆ  ಒತ್ತಾಯ ಮಾಡುತ್ತೇವೆ. ನೈತಿಕತೆ ಇದ್ದರೆ ರಾಜೀನಾಮೆ ಕೊಟ್ಟು ಹೋಗಿ ಎಂದು ಹೇಳಿದರು.

ಬೆಳವಾಡಿ ಗ್ರಾಮದ ಅಭಿವೃದ್ಧಿಗೆ ಕುಮಾರಸ್ವಾಮಿಯವರೇ ನೀವು ಸಿಎಂ ಆಗಿದ್ದಾಗ 14 ಕೋಟಿ ನೀಡಿದ್ದೀರಿ. ಆದ್ರೆ ಜಿಟಿ ದೇವೇಗೌಡ ಮತ್ತು ಅವರ ಪುತ್ರ ಹರೀಶ್ ಗೌಡ ಯಡಿಯೂರಪ್ಪರಿಂದ ಅನುದಾನ ತಂದು ಕೆಲಸ ಮಾಡಿಸಿದ್ದೇನೆಂದು ಹೇಳುತ್ತಿದ್ದಾರೆ. ಜನರಿಗೆ ದಾರಿ ತಪ್ಪಿಸುವ ಕೆಲಸವನ್ನ ಜಿಟಿಡಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ ಶಿವಮೂರ್ತಿ ಹೀಗಾಗಿ ಗ್ರಾಮದ ಜನರಿಗೆ ಕರಪತ್ರ ಹಂಚುವ ಮೂಲಕ ಜಿಟಿಡಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಣಸೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ನ ಮಂಜುನಾಥ್ ಗೆ ಜಿಟಿಡಿ ಮತ್ತು ಅವರ ಪುತ್ರ ಬೆಂಬಲ ಕೊಟ್ಟಿದ್ದಾರೆ ಜಿಟಿಡಿ ಕುಟುಂಬ ಅವಕಾಶವಾದಿ ಕುಟುಂಬ.ಪಕ್ಷ ವಿರೋಧಿ ಚಟುವಟಿಕೆ ಮಾಡುವ ಜಿಟಿ ದೇವೆಗೌಡರನ್ನ ಪಕ್ಷದಿಂದ ತೊಲಗಿಸಿ.  ಎಂದು ಬೆಳವಾಡಿ ಶಿವಮೂರ್ತಿ ವಾಗ್ದಾಳಿ ನಡೆಸಿದರು.

Key words: mysore-GT Deve Gowda- Expulsion- JDS party- Demand