Thursday, September 17, 2026

BDA Apartments

ಮೈಸೂರು: ನ. 1ರಂದು ಉಚಿತ ಆರೋಗ್ಯ ತಪಾಸಣೆ BDA JK_Adv BDA Adv
Home Front Page ಮೈಸೂರು: ನ. 1ರಂದು ಉಚಿತ ಆರೋಗ್ಯ ತಪಾಸಣೆ

ಮೈಸೂರು: ನ. 1ರಂದು ಉಚಿತ ಆರೋಗ್ಯ ತಪಾಸಣೆ

ಮೈಸೂರು,ಅಕ್ಟೋಬರ್,28,2025 (www.justkannada.in):  ಕನ್ನಡ ರಾಜ್ಯೋತ್ಸವ ಅಂಗವಾಗಿ ಶಾರದಾದೇವಿ ನಗರದ ವೃತ್ತದಲ್ಲಿರುವ ಸಮೃದ್ಧಿ ಡಯಾಗ್ನೋಸ್ಟಿಕ್ಸ್ ಸೆಂಟರ್( ಹಿರಣ್ಮಯಿ ಗ್ರೂಪ್ ಆಫ್ ಡಯಾಗ್ನೋಸ್ಟಿಕ್ಸ್) ವತಿಯಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಸಮಾಲೋಚನೆ ಶಿಬಿರವನ್ನು ನ.1 ರಂದು ಬೆಳಗ್ಗೆ 7ರಿಂದ ಸಂಜೆ 4 ರವರೆಗೆ ಆಯೋಜಿಸಲಾಗಿದೆ.
ಶಿಬಿರದಲ್ಲಿ ಬಿಪಿ, ಹೆಚ್ ಬಿ, ಎಫ್ ಬಿಎಸ್, ಪಿಪಿಬಿಎಸ್, ಇಸಿಜಿ, ಬ್ಲಡ್ ಗ್ರೂಪ್ ಪತ್ತೆ ಮತ್ತು ಬ್ಲಡ್ ಆಕ್ಸಿಜನ್ ಲೆವೆಲ್ ಪರೀಕ್ಷೆ ಇರಲಿದೆ.
ರೇಡಿಯಾಲಜಿಸ್ಟ್ ಡಾ. ಗಣೇಶ್ ಎಂ. ಶಿವಣ್ಣ, ಆಂಕೋ ಪೆಥಾಲಜಿಸ್ಟ್ ಡಾ.ಅನುಷಾ ರಾಮಚಂದ್ರಪ್ಪ ಮತ್ತು ಎಫ್ ಡಿ ಎಂ, ಎಸಿಎಲ್ಎಸ್ ತಜ್ಞ ಡಾ.ಅರವಿಂದ್ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಲ್ಲದೆ ನವೆಂಬರ್ ತಿಂಗಳ ಪೂರ್ತಿ ನಾನಾ ಆರೋಗ್ಯ ತಪಾಸಣೆ ಪ್ಯಾಕೇಜ್ ಅನ್ನು ಶೇ. 50ರಷ್ಟು ರಿಯಾಯಿತಿ ದರದಲ್ಲಿ ನೀಡಲಾಗುವುದು. ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಹಿರಣ್ಮಮಯಿ ಡಯಾಗ್ನೋಸ್ಟಿಕ್ಸ್ ಸಂಸ್ಥೆಯ ಮಾಲೀಕರಾದ ಡಾಕ್ಟರ್ ಗಣೇಶ್ ಎಂ ಶಿವಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಮೊಬೈಲ್ ನಂ. 9741541890

key words: Mysore, Free, health, check-up, Nov. 1