ಹೆಚ್. ವಿಶ್ವನಾಥ್ ದಡ್ಡನೋ..ಪೆದ್ದನೋ ನನಗೆ ಗೊತ್ತಿಲ್ಲ.- ಮಾಜಿ ಸಿಎಂ ಸಿದ್ಧರಾಮಯ್ಯ ವ್ಯಂಗ್ಯ…

ಮೈಸೂರು,ಜೂ,19,2020(www.justkannada.in): ವಿಧಾನಪರಿಷತ್ ಟಿಕೆಟ್ ಕೈತಪ್ಪಿದ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಮೇಲೆ ಆರೋಪ ಮಾಡಿದ್ದ ಮಾಜಿ ಸಚಿವ ಹೆಚ್.ವಿಶ್ವನಾಥ್ ಗೆ ಮಾಜಿ ಸಿಎಂ ಸಿದ್ಧರಾಮಯ್ಯ ಟಾಂಗ್ ನೀಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ವಿಶ್ವನಾಥ್ ಗೆ ನನ್ನ ಮೇಲೆ ನಂಜು. ಪ್ರತಿ ಬಾರಿ ನನ್ನ ಹೆಸರನ್ನೆ ಹೇಳುತ್ತಾರೆ. ಅವರಿಗೆ ಅಧಿಕಾರ ಸಿಗದಿದ್ದಾಗ ನನ್ನ ಹೆಸರು ನೆನಪಾಗುತ್ತೆ. ವಿಶ್ವನಾಥ್ ದಡ್ಡನೋ..ಪೆದ್ದನೋ ನನಗೆ ಗೊತ್ತಿಲ್ಲ. ನಾನು ಕಾಂಗ್ರೆಸ್ ನಲ್ಲಿದ್ದೀನಿ. ಅವನು ಬಿಜೆಪಿಯಲ್ಲಿದ್ದಾನೆ. ನಾನು ಹೇಗೆ ಅವನಿಗೆ ಟಿಕೆಟ್ ತಪ್ಪಿಸಲಿ ಎಂದು ವ್ಯಂಗ್ಯವಾಡಿದರು.mysore-former-cm-siddaramaiah-h-viswanath-cm-bs-yeddyurappa

ಯಡಿಯೂರಪ್ಪಗೆ ದಮ್ ಇಲ್ಲ…

ಇದೇ ವೇಳೆ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ದವೂ ಕಿಡಿಕಾರಿದ ಸಿದ್ಧರಾಮಯ್ಯ, ಸಿಎಂ ಯಡಿಯೂರಪ್ಪಗೆ ದಮ್ ಇಲ್ಲ. ಕೇಂದ್ರದಿಂದ ಬರಬೇಕಾದ ಹಣ ತರಿಸಲು ಸಾಧ್ಯವಾಗುತ್ತಿಲ್ಲ. ಮೋದಿ ಹೇಳಿದ ರೀತಿ ಡ್ಯಾನ್ಸ್ ಮಾಡುತ್ತಾರೆ. ಯಡಿಯೂರಪ್ಪಗೆ ದಮ್ ಇದ್ದರೆ ನಮಗೆ ಬರಬೇಕಾದ ಹಣ ಎಲ್ಲಾ ಬರುತಿತ್ತು ಎಂದು ವಾಗ್ದಾಳಿ ನಡೆಸಿದರು.

Key words: mysore- former cm- siddaramaiah-H.Viswanath-CM bs yeddyurappa