ಅವರೇನು ದಸರಾ ಉಸ್ತುವಾರಿ ಸಚಿವರಾ.? ವಸತಿ ಸಚಿವರಾ..?- ವಿ.ಸೋಮಣ್ಣ ವಿರುದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯ….

ಮೈಸೂರು,ಸೆ,12,2019(www.justkannada.in):  ಪ್ರವಾಹದಿಂದಾಗಿ ಹುಣಸೂರಿನಲ್ಲಿ ಸಂಪೂರ್ಣವಾಗಿ ಅನೇಕ ಮನೆಗಳು ಬಿದ್ದು ಹೋಗಿವೆ. ಆದ್ರೆ  ಸಚಿವ ಸೋಮಣ್ಣ ಅವರು ದಸರಾ ಉತ್ಸವಕ್ಕೆ ಮಾತ್ರ ಹೆಚ್ಚಿನ ಆದ್ಯತೆ ಕೊಡ್ತಿದ್ದಾರೆ. ಮೈಸೂರಿನಲ್ಲಿರುವ ಸಚಿವರು ದಸರಾ ಉಸ್ತುವಾರಿ ಸಚಿವರಾ.? ಅಥವಾ ಅವ್ರು ವಸತಿ ಸಚಿವರ ಎಂಬ ಅನುಮಾನ ಇದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಚಿಂತನ-ಮಂತನ ಸಭೆ ಬಳಿಕ  ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ  ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ದಸರಾ ಉತ್ಸವವನ್ನ ತಾವೇ ಕುಳಿತು ಮಾಡುವ ಅಗತ್ಯ ಇಲ್ಲ. ಅಧಿಕಾರಿಗಳಿಗೆ  ಉಸ್ತುವಾರಿ ಕೊಟ್ರೆ ದಸರಾ ಮಾಡ್ತಾರೆ. ರಾಜ್ಯದಲ್ಲಿ ಉಂಟಾಗಿರುವ ಅನಾಹುತಗಳ ಕಡೆ ಗಮನ ಕೊಟ್ಟು, ಸಂಕಷ್ಟದಲ್ಲಿರುವ ಜನರಿಗೆ  ನೆರವಾಗಲಿ ಎಂದು ಸಲಹೆ ನೀಡಿದರು.

ಸೋಮಣ್ಣ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಬಾರಿ ಜವಾಬ್ದಾರಿ ಹೊತ್ತು ದಸರಾ ಮಾಡ್ತಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯ ತಾಲ್ಲೂಕುಗಳಲ್ಲೂ ದಸರಾ ಸಭೆ ನಡೆಸ್ತಾರೆ. ಅದನ್ನ ನೆರೆ ಉಂಟಾಗಿರುವ ಸ್ಥಳಗಳಿಗೆ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ಸೋಮಣ್ಣ ಗಮನಹರಿಸಲಿ ಎಂದು ಸೋಮಣ್ಣ  ವಿರುದ್ಧ  ಹೆಚ್ಡಿಕೆ ವಾಗ್ದಾಳಿ ನಡೆಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರದ ಮೇಲೆ ಹೆಚ್ ಡಿ ಕೆ ಕಣ್ಣು…?

ಹಳ್ಳಿಗಳ ವಸ್ತುಸ್ಥಿತಿಯ ಬಗ್ಗೆ ಮಾಹಿತಿ ಕೊಡುವಂತೆ ಬದಾಮಿ ಕ್ಷೇತ್ರದ ನಮ್ಮ ಜೆಡಿಎಸ್ ಮುಖಂಡರಿಗೆ ಸೂಚನೆ ಕೊಟ್ಟಿದ್ದೇನೆ. ಮಾಧ್ಯಮಗಳ  ವರದಿ ನೋಡಿ ನಮ್ಮ ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇನೆ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದು ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರದ ಕಣ್ಣಾಗಿದ್ದಾರೆಯೇ ಎಂಬ ಕುತೂಹಲ ಮೂಡಿದೆ.

ಇಂದು ಮೈಸೂರು ನಗರ ವ್ಯಾಪ್ತಿಯ ಪಾಲಿಕೆ ಸದಸ್ಯರು ಹಾಗೂ ಜೆಡಿಎಸ್ ಮುಖಂಡರ ಸಭೆ ಕರೆದು ಚರ್ಚಿಸಿದ್ದೇನೆ. ಮೈತ್ರಿ ಸರ್ಕಾರದ  ಪತನದ ನಂತ್ರ ಆದ ರಾಜಕೀಯ ಬೆಳವಣಿಗೆ ಕುರಿತು ಚರ್ಚಿಸಲಾಗಿದೆ. ಮುಕ್ತವಾಗಿ ಚರ್ಚಿಸಲು ಅವಕಾಶ ಕಲ್ಪಿಸಿದ್ದೆ. ಪಕ್ಷದ ಪ್ರಮುಖ ಮುಖಂಡರಿಗೆ ಆದ ಅನಾನುಕೂಲ, ಹಾಗೂ ನೋವಿನ ಭಾವನೆ ವ್ಯಕ್ತಪಡಿಸಿದ್ದಾರೆ. ಅವರ ದುಗುಡ ನೋವು ವ್ಯಕ್ತಪಡಿಸಲು ಇಂದು ವೇದಿಕೆ ಆಗಿತ್ತು ಎಂದು ಮಾಜಿ ಸಿಎಂ ಹೆಚ್.ಡಿ ಹೇಳಿದರು.

ರಾಜ್ಯದ ನೆರೆಯಿಂದ ಉತ್ತರ ಕರ್ನಾಟಕ ಭಾಗದಲ್ಲಿ ಅಪಾರ ನಷ್ಟ ಆಗಿದೆ. ನಾನು ಅಲ್ಲಿಗೆ ಹೋಗಿ ಕಷ್ಟ ಆಲಿಸಿದ್ದೆ. ಆದ್ರೆ ರಾಜ್ಯ ಸರ್ಕಾರ ಜನರ ನಿರೀಕ್ಷೆ ಹುಸಿ ಮಾಡಿದೆ. ಸಾಕಷ್ಟು ಕುಟುಂಬಗಳು ಬೀದಿಪಾಲಾಗಿವೆ. ಅವರಿಗೆ ಒಂದು ಸೂರು ಒದಗಿಸಲು ಇನ್ನೂ ಆಗಿಲ್ಲ.ರಾಜ್ಯದಲ್ಲಿ ವಸತಿ ಇಲಾಖೆ ಅನ್ನೊದು ಇದೆಯಾ? ಎಂಬ ಅನುಮಾನ ಮಾಡ್ತಿದೆ ಎಂದು ಸರ್ಕಾರದ ವಿರುದ್ದ ಹೆಚ್.ಡಿ ಕುಮಾರಸ್ವಾಮಿ ಹರಿಹಾಯ್ದರು.

ಜಿಟಿಡಿನ ನಾವೇ ಕಳುಹಿಸಿದ್ದೇವೆ ಬಿಜೆಪಿಯವರ ಜೊತೆ ಸುತ್ತಾಡಿ  ದಸರಾ ಮಾಡಿ ಅಂತಾ…? ವ್ಯಂಗ್ಯವಾಡಿದ ಹೆಚ್.ಡಿಕೆ.

ಇದೇ ವೇಳೆ ಮಾಜಿ ಸಚಿವ ಜಿ.ಟಿ ದೇವೇಗೌಡರ ಕುರಿತು ವ್ಯಂಗ್ಯವಾಡಿದ ಹೆಚ್.ಡಿ ಕುಮಾರಸ್ವಾಮಿ, ಜಿಟಿಡಿನ ನಾವೇ ಕಳುಹಿಸಿದ್ದೇವೆ ಬಿಜೆಪಿಯವರ ಜೊತೆ ಸುತ್ತಾಡಿ ದಸರಾ ಮಾಡಿ ಅಂತಾ. ಕಳೆದ ವರ್ಷ ಉಸ್ತುವಾರಿ ವಹಿಸಿ  ದಸರಾ ಆಚರಿಸಿದ್ದ ಜಿಟಿಡಿ ಅದೇ ಗುಂಗಲ್ಲಿ ಇದ್ದಾರೆ. ಬಿಜೆಪಿಯವರ ಜೊತೆ ತಮ್ಮ ಅನುಭವ ಹಂಚ್ಕೊಂಡು  ದಸರಾ ಆಚರಣೆ ಮಾಡ್ತಿದ್ದಾರೆ. ಅದ್ಕೆ  ಜಿಟಿಡಿನ ನಾವೇ ಕಳುಹಿಸಿದ್ದೇವೆ ಬಿಜೆಪಿಯವರ ಜೊತೆ ಸುತ್ತಾಡಿ ದಸರಾ ಮಾಡಿ ಅಂತ ಎಂದು ನಗು ನಗುತ್ತಲೇ ವ್ಯಂಗ್ಯವಾಡಿದರು.

Key words: mysore- Former CM -HD Kumaraswamy- irony -against –minister-V. Somanna