ಆ.19 ರಿಂದ ನಾಲ್ಕು ದಿನಗಳ ಕಾಲ ಮೈಸೂರಿನಲ್ಲಿ ಹೂವಿನ ಮಾರುಕಟ್ಟೆ ಸ್ಥಳಾಂತರ…

ಮೈಸೂರು,ಆ,17,2020(www.justkannada.in): ಗೌರಿ ಗಣೇಶ ಹಬ್ಬ ಹಿನ್ನೆಲೆ, ಆಗಸ್ಟ್ 19ರಿಂದ ನಾಲ್ಕು ದಿನಗಳ ಕಾಲ ಮೈಸೂರಿನ ದೇವರಾಜ ಹೂವಿನ ಮಾರುಕಟ್ಟೆಯನ್ನ ಸ್ಥಳಾಂತರ ಮಾಡಲಾಗಿದೆ.jk-logo-justkannada-logo

ರೈಲ್ವೆ ನಿಲ್ದಾಣದ ಬಳಿಯ ಜೆ.ಕೆ ಮೈದಾನದಲ್ಲಿ ಹೂ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹಬ್ಬದ ಪ್ರಯುಕ್ತ ಹೆಚ್ಚು ಜನ ಸೇರುವ ಹಿನ್ನೆಲೆ, ಜನಸಂದಣಿಯನ್ನು ನಿಯಂತ್ರಿಸುವ ಸಲುವಾಗಿ ಆಗಸ್ಟ್ 19ರಿಂದ ಆಗಸ್ಟ್ 22ರ ವರೆಗೆ ಹೂವಿನ ಮಾರುಕಟ್ಟೆಯನ್ನ ಸ್ಥಳಾಂತರ ಮಾಡಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗ್ಡೆ ಆದೇಶ ಹೊರಡಿಸಿದ್ದಾರೆ.Mysore -Flower Market -Transfer - four days

Key words: Mysore -Flower Market -Transfer – four days