ಕೊರೋನಾ ಅಟ್ಟಹಾಸ ನಡುವೆ ಪ್ರವಾಹ ಭೀತಿ: ಕಪಿಲಾ ನದಿ ಪಾತ್ರದ ಜನ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ…

ಮೈಸೂರು,ಆ,4,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯಲ್ಲಿ ಒಂದೆಡೆ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದರೇ ಇನ್ನೊಂದೆಡೆ ಪ್ರವಾಹದ ಭೀತಿ ಎದುರಾಗಿದೆ.jk-logo-justkannada-logo

ಕಬಿನಿ ಜಲಾಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಕಪಿಲಾ ನದಿ ಪಾತ್ರದಲ್ಲಿ ಪ್ರವಾಹದ ಮುನ್ಸೂಚನೆ ಎದುರಾಗಿದೆ.  ಈ ಹಿನ್ನೆಲೆ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕಾವೇರಿ ನೀರಾವರಿ ನಿಗಮ ಸೂಚನೆ ನೀಡಿದೆ.mysore-Flood - Kapila River-- instructed -move - safe place-DC- Abhiram je shankar

ನದಿಯಲ್ಲಿ ಪ್ರಸ್ತುತ ಒಳಹರಿವು 10,000 ಕ್ಯೂಸೆಕ್ ಇದ್ದು  ಹೊರ ಹರಿವಿನ ಪ್ರಮಾಣ 2000 ಕ್ಯೂಸೆಕ್ ಆಗಿದೆ.ಇಂದು ಹೊರಹರಿವು 16,000 ಕ್ಯೂಸೆಕ್ ​ಗೆ ಏರಿಕೆಯಾಗುವ ಸಾಧ್ಯತೆ ಇದೆ. ಇನ್ನು ಕಬಿನಿ ನದಿ ಪಾತ್ರ, ಎರಡೂ ದಂಡೆಯಲ್ಲಿರುವ ಜನರಿಗೆ ಆಸ್ತಿಪಾಸ್ತಿ, ಜಾನುವಾರುಗಳ ರಕ್ಷಣೆ  ಹಾಗೂ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಿ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆದೇಶ ಹೊರಡಿಸಿದ್ದಾರೆ.

Key words: mysore-Flood – Kapila River– instructed -move – safe place-DC- Abhiram je shankar