ಪಟಾಕಿ ಸಿಡಿದು ಬಾಲಕನ ಕೈಗೆ ಗಾಯ…

ಮೈಸೂರು,ಅ,29,2019(www.justkannada.in): ಪಟಾಕಿ ಸಿಡಿದು ಬಾಲಕನ ಕೈಗೆ ಗಾಯವಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಜೆ.ಕೆ. ಮೈದಾನದಲ್ಲಿ ಈ ಘಟನೆ ನಡೆದಿದೆ.  ಮನೀಷ್ (15) ಎಂಬ ಬಾಲಕನ ಎಡಗೈಗೆ ಗಾಯವಾಗಿದೆ. ಬಾಂಬ್ ಪಟಾಕಿಯನ್ನು ಕೈಯಲ್ಲಿ ಹಿಡಿದು ಹೊಡೆದ ಪರಿಣಾಮ ಬಾಲಕನ ಎರಡು ಬೆರಳುಗಳ ನಡುವೆ ಗಾಯವಾಗಿದ್ದು, ಗಾಯಗೊಂಡಿರುವ ಮನೀಷ್ ಗೆ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೇವಲ ಹೊಗೆ ಬರುವ ಪಟಾಕಿ ಎಂದು ಹೇಳಿ ಪಟಾಕಿ ಅಂಗಡಿ ವರ್ತಕ ಪಟಾಕಿಯನ್ನ ನೀಡಿದ್ದ. ಅದನ್ನು ಮನೀಷ್ ಸ್ಥಳದಲ್ಲೇ ಪ್ರಯೋಗ ಮಾಡಿದ್ದನು. ಈ ವೇಳೆ ಪಟಾಕಿ ಕೈಯಲ್ಲೇ ಸಿಡಿದು ಈ ಅವಘಡ ಸಂಭವಿಸಿದೆ.

Key words: mysore- Fireworks- burst – boy- hands-injury