ಸಾಲದ ಭಯ: ವಿಷ ಕುಡಿದು ರೈತ ಆತ್ಮಹತ್ಯೆಗೆ ಶರಣು.

ಮೈಸೂರು,ಏಪ್ರಿಲ್,5, 2024 (www.justkannada.in):  ಜಮೀನಿನಲ್ಲಿ ನೀರಿಲ್ಲದೆ ಮಾಡಿದ ಸಾಲದ ಭಯದಿಂದ  ರೈತ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ಚುಂಚ್ಚನಹಳ್ಳಿ ಗ್ರಾಮದಲ್ಲಿ ನಡೆದಿದೆ.

ನಾಗಭೂಷಣ್ (61) ಆತ್ಮಹತ್ಯೆಗೆ ಶರಣಾದ ರೈತ. ಒಂದೂವರೆ ಎಕರೆ ಜಾಗದಲ್ಲಿ ರೈತ ನಾಗಭೂಷಣ್  ಬಾಳೆ ಬೆಳೆ ಹಾಕಿದ್ದರು. ಬರಗಾಲ ಹಿನ್ನಲೆ 200 ಅಡಿ ಬೋರ್ ತೆಗೆದರೂ ನೀರು ಬಾರದ ಹಿನ್ನಲೆ ಬಾಳೆ ಬೆಳೆಗೆ ತಂದಿದ್ದ ಕೀಟನಾಶಕ ಸೇವಿಸಿ ರೈತ ನಾಗಭೂಷಣ್ ಅಸ್ವಸ್ಥರಾಗಿದ್ದರು.

ಕಳೆದ ಎಂಟು ದಿನಗಳಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಾಗಭೂಷಣ್ ಚಿಕಿತ್ಸೆ ಪಡೆಯುತ್ತಿದ್ದರು. ಈ ನಡುವೆ ಇಂದು ಚಿಕಿತ್ಸೆ ಫಲಕಾರಿಯಾಗದೆ ರೈತ  ನಾಗಭೂಷಣ್ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

Key words: mysore, Farmer, suicide