ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ರೈತ.

ಮೈಸೂರು,ಜೂನ್,29,2021(www.justkannada.in):   ರಸ್ತೆ ಅಪಘಾತಕ್ಕೀಡಾಗಿ ಮೃತಪಟ್ಟ ರೈತ ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಘಟನೆ  ನಡೆದಿದೆ.jk

ಮದ್ದೂರು ತಾಲೂಕಿನ ಅಜ್ಜಹಳ್ಳಿ ನಿವಾಸಿ ರಾಮಕೃಷ್ಣ(50) ಎಂಬುವವರೇ ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ರಾಮಕೃಷ್ಣ ಅವರು ಶ್ರೀರಂಗಪಟ್ಟಣದ ಬಳಿ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ರಾಮಕೃಷ್ಣ ಅವರಿಗೆ ಮೆದುಳು ನಿಷ್ಕ್ರಿಯವಾಗಿರುವ ವಿಷಯವನ್ನ ವೈದ್ಯರು ತಿಳಿಸಿದ್ದಾರೆ.

ಈ ವೇಳೆ ರಾಮಕೃಷ್ಣ ಅವರ ಅಂಗಾಂಗ ದಾನ ಮಾಡಲು ಕುಟುಂಬಸ್ಥರು ನಿರ್ಧಾರ ಮಾಡಿದ್ದು, ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಯಿತು. ವಿಶೇಷ ಆ್ಯಂಬುಲೆನ್ಸ್ ನಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಗ್ರೀನ್ ಕಾರಿಡಾರ್ ಮೂಲಕ ಮೃತದೇಹ ರವಾನೆ ಮಾಡಲಾಯಿತು.

Key words: mysore-farmer –death-accident- donated -organ