ಡಿ.12ರಿಂದ ಮೂರು ದಿನಗಳ ಕಾಲ ‘ಮೈಸೂರು ಇಂಗ್ಲಿಷ್ ಥೇಟರ್ ಫೆಸ್ಟಿವಲ್’

ಮೈಸೂರು, ಡಿಸೆಂಬರ್,9,2025 (www.justkannada.in): ಮೈಸೂರು ಇಂಗ್ಲಿಷ್ ಥಿಯೇಟರ್ ಫೋರಂ (METF) ವತಿಯಿಂದ ಮೈಸೂರು ಇಂಗ್ಲಿಷ್ ಥೇಟರ್ ಫೆಸ್ಟಿವಲ್’ ನ ಮೊದಲ ಆವೃತ್ತಿ ಡಿಸೆಂಬರ್ 12ರಿಂದ 14ರ ವರೆಗೆ ವಿಜಯನಗರ 1ನೇ ಹಂತದಲ್ಲಿರುವ ಜಗನ್ನಾಥ ಆರ್ಟ್ ಅಂಡ್ ಕಲ್ಚರ್ ಕೇಂದ್ರ (JCAC)ದಲ್ಲಿ ನಡೆಯಲಿದೆ.

ಈ ಮೂರು ದಿನಗಳ ನಾಟಕೋತ್ಸವದಲ್ಲಿ ಇಂಗ್ಲಿಷ್ ರಂಗಭೂಮಿಯ ಪಠ್ಯದ ವಾಚನಗಳು ಮತ್ತು ನಾಟಕಗಳ ಪ್ರದರ್ಶನಗಳು ಹಮ್ಮಿಕೊಳ್ಳಲಾಗಿದೆ.

ನಾಟಕೋತ್ಸವದ ಉದ್ಘಾಟನಾ ಕಾರ್ಯಕ್ರಮವೂ ಡಿಸೆಂಬರ್ 12 ರ ಸಂಜೆ 6.00 ಗಂಟೆಗೆ ಜರುಗಲಿದ್ದು, ಕಲ್ಪ ಹೆರಿಟೇಜ್ ಟ್ರಸ್ಟ್  ನಿರ್ದೇಶಕ ಡಾ. ವಿ. ಆರ್. ಅನಿಲ್ ಕುಮಾರ್, ಮತ್ತು  ಮೈಸೂರಿನ ಹಿರಿಯ ರಂಗಭೂಮಿ ಕಲಾವಿದೆ ಹರಿಪ್ರಸಾದ್ ಇವರು ನಡೆಸಿಕೊಡಲಿದ್ದಾರೆ.

ಡಿಸೆಂಬರ್ 12ರಂದು ಸಂಜೆ 5 ಗಂಟೆಗೆ ಭಾರತೀಯ ಇಂಗ್ಲೀಷ್ ನಾಟಕಗಳ ಓದಿನ ಕಾರ್ಯಕ್ರಮದೊಂದಿಗೆ ಪ್ರಾರಂಭವಾಗಲಿದೆ. ಡಿಸೆಂಬರ್ 13ರಂದು ಸಂಜೆ 5 ಗಂಟೆಗೆ ಕಾವ್ಯ ವಾಚನ ಮತ್ತು ಡಿಸೆಂಬರ್ 14ರಂದು ಸಂಜೆ 5 ಗಂಟೆಗೆ ಅಂತಾರಾಷ್ಟ್ರೀಯ ಇಂಗ್ಲೀಷ್ ನಾಟಕಗಳ ವಾಚನ ನಡೆಯಲಿದೆ. ಪ್ರತಿದಿನವೂ ಸಂಜೆ ನಕ್ಷತ್ರ ಅಮ್ಫಿಥಿಯೇಟರ್‌ ನಲ್ಲಿ ಓಪನ್ ಮೈಕ್ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಜನರಿಗೆ ಮುಕ್ತ ಪ್ರವೇಶವಿದೆ.

ಉತ್ಸವದಲ್ಲಿ ಮೂರು ನಾಟಕಗಳನ್ನು ಪ್ರದರ್ಶಿಸಲಾಗುತ್ತದೆ. ಡಿಸೆಂಬರ್ 12ರಂದು ಸಂಜೆ 6.30ಕ್ಕೆ ಕಲಾಸರುಚಿ ಸಂಸ್ಥೆಯು ಸುಂದರ್ ಸರುಕೈ ಅವರ ರಚನೆಯ ಮತ್ತು ಬದರಿ ನಾರಾಯಣ ನಿರ್ದೇಶನದ “ಟು ಫಾದರ್ಸ್” ನಾಟಕವನ್ನು ಪ್ರದರ್ಶಿಸಲಿದೆ. ಡಿಸೆಂಬರ್ 13ರಂದು ಸಂಜೆ 6.30ಕ್ಕೆ ವೀಮೂವ್ ಥಿಯೇಟರ್  ತಂಡದ “ಹೂ ಕಿಲ್ಡ್ ಅಗಥಾ?” ನಾಟಕವನ್ನು ಪ್ರದರ್ಶಿಸಲಿದ್ದು, ಕಥೆ ರಂಗರಾಜ ಭಟ್ರಾಚಾರ್ಯ ಮತ್ತು ಪವನ್ ಶರ್ಮಾ,  ರಂಗರೂಪ: ಆದಿತ್ಯ ನಾಯಕ್; ನಿರ್ದೇಶನ: ಪವನ್ ಶರ್ಮಾ.

ಡಿಸೆಂಬರ್ 14ರಂದು ಸಂಜೆ 6.30ಕ್ಕೆ ದಿ ಆ್ಯಕ್ಟರ್ಸ್ ಕಲೆಕ್ಟಿವ್ ತಂಡದ “ದಿ ಮಹಾಭಾರತ ಪ್ರಾಜೆಕ್ಟ್” ನಾಟಕದ ಪ್ರದರ್ಶನವಿರುತ್ತದೆ. ಇದರ ಆಲೋಚನೆ ಅಂಶುಲ್ ಜಂಬಾನಿ ಹಾಗೂ ಪಿ.ಐ. ರಾಜೇಶ್, ರಚನೆ ಹಾಗೂ ನಿರ್ದೇಶನ ಪಿ.ಐ. ರಾಜೇಶ್.

ಪ್ರತಿ ನಾಟಕದ ಟಿಕೆಟ್‌ ಬೆಲೆ ₹200 ಮತ್ತು ಮೂರು ದಿನಗಳ ನಾಟಕಕ್ಕೆ ಪಾಸ್ ₹500. ಟಿಕೆಟುಗಳು ಬುಕ್ ಮೈ ಶೋ ನಲ್ಲಿ ಕೂಡ ಸಿಗಲಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 91082 90415

Key words: Mysore, English Theatre Festival, three days