ಮೈಸೂರು ದಸರಾ ಖರ್ಚು ವೆಚ್ಚದ ಪಟ್ಟಿ ಬಿಡುಗಡೆ ಮಾಡಿದ ಜಿಲ್ಲಾಡಳಿತ.

ಮೈಸೂರು,ಡಿಸೆಂಬರ್,2,2023(www.justkannada.in):   ಮೈಸೂರು ದಸರಾ ಮಹೋತ್ಸವದ ಅನುದಾನ ಮತ್ತು ವೆಚ್ಚದ ವಿವರಗಳನ್ನೊಳಗೊಂಡ ಪಟ್ಟಿಯನ್ನ ಮೈಸೂರು ಜಿಲ್ಲಾಡಳಿತ ಬಿಡುಗಡೆ ಮಾಡಿದೆ.

ಸರಳ ಹಾಗೂ ಸಾಂಪ್ರದಾಯಿಕ ದಸರಾ ಆಚರಣೆ ಎಂದಿದ್ದ ಸರ್ಕಾರ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಖರ್ಚು ಮಾಡಿದೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಮೈಸೂರು ಜಿಲ್ಲಾಧಿಕಾರಿ ಡಾ ಕೆ. ವಿ ರಾಜೇಂದ್ರ ಖರ್ಚು ವೆಚ್ಚದ ಪಟ್ಟಿ ಬಿಡುಗಡೆ ಮಾಡಿ ಮಾಹಿತಿ ನೀಡಿದರು.

ಈ ಬಾರಿಯ ದಸರಾ ಮಹೋತ್ಸವದಲ್ಲಿ 29 ಕೋಟಿಗೂ ಅಧಿಕ ಹಣ ಖರ್ಚಾಗಿದೆ. ಕಳೆದ 2022ನೇ ಸಾಲಿನಲ್ಲಿ  26,08,88,819 ರೂಪಾಯಿ ಅನುದಾನ ಸಿಕ್ಕಿತ್ತು. ಒಟ್ಟು 28,74,49,058 ರೂಪಾಯಿ ವೆಚ್ಚವಾಗಿತ್ತು. 2023ನೇ ಸಾಲಿನಲ್ಲಿ ಒಟ್ಟಾರೆಯಾಗಿ 29,26,65,000 ರೂಪಾಯಿ ಅನುದಾನ ಲಭ್ಯವಾಗಿತ್ತು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 10 ಕೋಟಿ ಅನುದಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 15 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಪ್ರಾಯೋಜಕತ್ವದಿಂದ 2,25,70,000 ಮೊತ್ತ, ಟಿಕೆಟ್ ಮತ್ತು ಗೋಲ್ಡ್ ಕಾರ್ಡ್ ಮಾರಾಟದಿಂದ 1,19,95,000 ಮೊತ್ತ ಸಂಗ್ರಹವಾಗಿತ್ತು.

ಆಹಾರ ಮೇಳದಿಂದ 81 ಲಕ್ಷ ರಾಜಸ್ವ ಸ್ವೀಕೃತಿ ಬಂದಿದ್ದು, 2023ನೇ ಸಾಲಿನಲ್ಲಿ ಒಟ್ಟು 29,25,22,049 ರೂಪಾಯಿ ವೆಚ್ಚವನ್ನ ಜಿಲ್ಲಾಡಳಿತ ತೋರಿಸಿದೆ.

Key words: Mysore Dussehra –expenditure- list – released – district administration.