ಮೈಸೂರು ಜಿಲ್ಲೆಯ ಇಬ್ಬರು ಶಾಸಕರು ಅಧಿವೇಶನಕ್ಕೆ ಗೈರು…

ಬೆಂಗಳೂರು,ಸೆಪ್ಟಂಬರ್,21,2020(www.justkannada.in): ಇಂದಿನಿಂದ ರಾಜ್ಯ ವಿಧಾನ ಮಂಡಲ ಅಧಿವೇಶನ ಆರಂಭವಾಗಿದ್ದು ಇಂದು ಅಧಿವೇಶನದಲ್ಲಿ ಪ್ರಮುಖ ಅಂಶಗಳ ಚರ್ಚೆ ನಡೆಯಲಿದೆ. ಈ ನಡುವೆ ಮೈಸೂರು ಜಿಲ್ಲೆಯ ಇಬ್ಬರು ಶಾಸಕರು ಅಧಿವೇಶನಕ್ಕೆ ಗೈರಾಗಿದ್ದಾರೆ.jk-logo-justkannada-logo

ಇಂದು ಬೆಳಗ್ಗೆ 11ಗಂಟೆಯಿಂದ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗಿದ್ದು, ಸದನಕ್ಕೆ ಹಾಜರಾಗುವ ಸದಸ್ಯರು ಕೊರೋನಾ ನೆಗೆಟಿವ್ ವರದಿ ತರುವುದು ಕಡ್ಡಾಯವಾಗಿದೆ. ಹೀಗಾಗಿ ಮೈಸೂರು ಭಾಗದ ಶಾಸಕರಾದ ಹೆಚ್ ಮಂಜುನಾಥ್ ಮಹದೇವ್ ಇಬ್ಬರಿಗೂ ಕೊರೋನಾ ಸೋಂಕು ತಗುಲಿದ್ದು ಈ ಹಿನ್ನೆಲೆ ಅಧಿವೇಶನಕ್ಕೆ ಗೈರಾಗಿದ್ದಾರೆ.mysore-district-two-mlas-corona-session-absent

ಕೊರೋನ ಪಾಸಿಟಿವ್ ಹಿನ್ನೆಲೆ ಹುಣಸೂರು ಶಾಸಕ ಹೆಚ್ ಮಂಜುನಾಥ್ ಹಾಗೂ ಪಿರಿಯಾಪಟ್ಟಣ ಶಾಸಕ ಮಹದೇವ್ ಇಬ್ಬರು ಅಧಿವೇಶನದಿಂದ ದೂರ ಉಳಿದಿದ್ದಾರೆ.

Key words: Mysore -district – Two MLAs –corona-session-absent