ಮೈಸೂರು ಅಭಿವೃದ್ಧಿಗೆ ಮತ್ತೊಂದು ಹೆಜ್ಜೆ: ಮುಡಾ ಬದಲು MDA ಸ್ಥಾಪನೆ

ಮೈಸೂರು,ಮೇ,22,2025 (www.justkannada.in): ನಿವೇಶನ ಹಂಚಿಕೆ ಹಗರಣದಿಂದ ಅಪಖ್ಯಾತಿಗೆ ಒಳಗಾಗಿರುವ ಮುಡಾಗೆ ರಾಜ್ಯ ಸರ್ಕಾರ ದೊಡ್ಡ ಸರ್ಜರಿ ಮಾಡಲು ಮುಂದಾಗಿದ್ದು, ಮುಡಾ ಬದಲು ಮೈಸೂರು ಅಭಿವೃದ್ಧಿ ಪ್ರಾಧಿಕಾರ (MDA) ಸ್ಥಾಪನೆ ಮೂಲಕ ಮೈಸೂರು ಅಭಿವೃದ್ಧಿಗೆ ಮತ್ತೊಂದು ಹೆಜ್ಜೆ ಇಡುತ್ತಿದೆ.

ರಾಜ್ಯ ಸರ್ಕಾರ ಇದೀಗ ಮುಡಾ ರದ್ದುಗೊಳಿಸಿ ಅದರ ಬದಲು ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಮುಂದಾಗಿದೆ. ಈ ಕುರಿತು ಮಹತ್ವದ ತೀರ್ಮಾನ ಕೈಗೊಂಡಿರುವ ರಾಜ್ಯ ಸರಕಾರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ವನ್ನು ಬಿಡಿಎ ಮಾದರಿಯಲ್ಲಿ ರಚಿಸಲು ತೀರ್ಮಾನಿಸಿದೆ.  ಆ ಮೂಲಕ ಈಗಿರುವ ಮುಡಾ ರದ್ದಾಗಲಿದೆ. ಮುಡಾದ ಎಲ್ಲಾ ಅಧಿಕಾರ, ಬಾಧ್ಯತೆ, ಹೊಣೆಗಾರಿಕೆ, ಆಸ್ತಿಗಳು ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗಾವಣೆಯಾಗಲಿದೆ.

ಬೆಂಗಳೂರು ಬಳಿಕ ಮೈಸೂರು ವೇಗವಾಗಿ ಬೆಳೆಯುತ್ತಿದ್ದು, ಹೀಗಾಗಿ ಮೈಸೂರು ಸಮಗ್ರ ಅಭಿವೃದ್ಧಿಗೆ ಎಂಡಿಎ ಸ್ಥಾಪನೆಗೆ ಸರ್ಕಾರ ಮುಂದಾಗಿದೆ.  ಎಂಡಿಎ  ಸ್ಥಾಪನೆಯಾದರೆ ಮೈಸೂರಿನ ಚಿತ್ರಣ ಬದಲಾಗಲಿದೆ. ಇದರಿಂದಾಗಿ ಮುಂದಿನ 40, 50 ವರ್ಷಗಳ ದೂರದೃಷ್ಟಿ ಯೋಜನೆ ತರುವ ಸ್ವಂತ ನಿರ್ಧಾರ ಕೈಗೊಳ್ಳಬಹುದು.

ಅಧಿನಿ‌ಯಮ 1987 ರ ಕಲಂನಡಿ ಮುಡಾ ಕಾರ್ಯ ನಿರ್ವಹಿಸುತ್ತಿದ್ದು, ಎಂಡಿಎ ಆಗಿ ಪರಿವರ್ತನೆಯಾದ ಬಳಿಕ  ಹೊಸ ಕಾಯ್ದೆ, ನಿಯಮಗಳು ಅನ್ವಯವಾಗಲಿದೆ. ಬಿಡಿಎ ಮಾದರಿಯಲ್ಲಿ ಎಂಡಿಎ ಸಹ ಪ್ರತ್ಯೇಕ ಕಾಯ್ದೆ ಕಟ್ಟಳೆಗಳೊಂದಿಗೆ ಕಾರ್ಯಾರಂಭ ಮಾಡಲಿದೆ.

ಎಂಡಿಎ ರಚನೆಯಿಂದ ರಿಯಲ್ ಎಸ್ಟೇಟ್ ವಲಯ ಗರಿಗೆದರಿದ್ದು, ಎಂಡಿಎ ರಚನೆಯಿಂದ ನಂಜನಗೂಡು, ಶ್ರೀರಂಗಪಟ್ಟಣ ಸೇರಿದಂತೆ ಇತರೇ ಪಟ್ಟಣಗಳ ಅಭಿವೃದ್ಧಿಗೂ ಅವಕಾಶ ಸಿಗಲಿದೆ. ಸರ್ಕಾರದಿಂದ ನೇರವಾಗಿ ಅನುದಾನ ರವಾನೆಯಿಂದ ಸುತ್ತಮುತ್ತಲ ತಾಲ್ಲೂಕು, ಹಳ್ಳಿಗಳಲ್ಲಿ ಅಭಿವೃದ್ಧಿಗೂ ಅವಕಾಶ ಸಿಗಲಿದೆ.  ಆದರೆ ಎಂಡಿಎ ನಿಯಮಗಳ ಬಗ್ಗೆ ಸಾರ್ವಜನಿಕರು ಇನ್ನೂ ಸ್ಪಷ್ಟತೆ ಇಲ್ಲದೆ ಗೊಂದಲದಲ್ಲದ್ದು, ಹೊಸ ವ್ಯವಸ್ಥೆಯಿಂದಾಗಿ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ.

Key words: Mysore development,  Establishment, MDA, instead, MUDA