ಮೈಸೂರು ಜಿಲ್ಲಾಧಿಕಾರಿ ಆದೇಶಕ್ಕೆ ತಡೆ ನೀಡಿದ್ದೇ ಸಂಕಷ್ಟಕ್ಕೆ ದಾರಿಯಾಯಿತಾ.

 

ಮೈಸೂರು, ಏ.25, 2021 : (www.justkannada.in news ) ಸದ್ಯ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಜನ ಹಿಡಿ ಶಾಪ ಹಾಕುತ್ತಿದ್ದಾರೆ. ಜನಪರ ಕಾಳಜಿ ಉದ್ದೇಶದಿಂದ ಮೈಸೂರಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಏಪ್ರಿಲ್ ತಿಂಗಳ ಆರಂಭದಲ್ಲಿಯೇ ರಾಜ್ಯದಾದ್ಯಂತ ಹಾಗೂ ವಿಶೇಷವಾಗಿ ಬೆಂಗಳೂರು ನಗರದಲ್ಲಿ ಹೆಚ್ಚಾಗುತ್ತಿದ್ದಂತಹ ಕೋವಿಡ್ ಪ್ರಕರಣಗಳ ಸಂಖ್ಯೆಯನ್ನು ಗಮನಿಸಿ ಮುಂಜಾಗ್ರತೆಗೆ ಮುಂದಾಗಿದ್ದರು. ಆದರೆ ಸರಕಾರ ಇದಕ್ಕೆ ತಡೆ ನೀಡಿದ್ದು ಜಿಲ್ಲಾಧಿಕಾರಿ ಕೈಕಟ್ಟಿ ಹಾಕಿತು.

ಮೈಸೂರಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಎಲ್ಲಾ ಪ್ರವಾಸಿರಿಗೆ, ಮೈಸೂರು ನಗರದ ಸಮುದಾಯ ಭವನಗಳು, ಸಿನಿಮಾ ಥಿಯೇಟರ್‌ಗಳು, ರೆಸಾರ್ಟ್ಗಳು ಹಾಗೂ ಮನರಂಜನಾ ಕ್ಲಬ್‌ಗಳಿಗೆ ಭೇಟಿ ನೀಡುವವರಿಗೆ ಆರ್‌ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯಪಡಿಸಿ ಆದೇಶ ಹೊರಡಿಸಿದ್ದರು. ಆದರೆ ರಾಜ್ಯ ಸರ್ಕಾರ ಅದಕ್ಕೆ ತಡೆ ನೀಡಿ ಆದೇಶವನ್ನು ರದ್ದುಪಡಿಸುವಂತೆ ತಿಳಿಸಿತು.
ನಂತರ ಡಿಸಿ ರೋಹಿಣಿ ಸಿಂಧೂರಿ, ತಮ್ಮ ಆದೇಶ ಕಡ್ಡಾಯವಲ್ಲ, ಆದರೆ ಇದನ್ನು ಸಲಹೆಯಂತೆ ಪರಿಗಣಿಸಿ ಎಂದರು. ಇದರಿಂದ ಎಲ್ಲರೂ ಗೊಂದಲಕ್ಕೀಡಾಗಿದ್ದರು. ಅಂದರೆ ಅವರ ಉದ್ದೇಶ ಕೇವಲ ಮೈಸೂರಿನಲ್ಲಿಯೇ ಉಳಿದುಕೊಳ್ಳುವವರು ಮಾತ್ರ ಇಲ್ಲಿಗೆ ಬರುವಂತಾಗಲಿ ಎಂದಾಗಿತ್ತು. ಆದರೆ ಯಾವಾಗ ಡಿಸಿಯವರು ಆರ್‌ಟಿಪಿಸಿಆರ್ ನೆಗೆಟಿವ್ ವರದಿ ತರುವುದು ಕಡ್ಡಾಯವಲ್ಲ ಎಂದರೋ ಆಗ ಪರ ಸ್ಥಳಗಳಿಂದ ಜನ ಮೈಸೂರಿಗೆ ದಾಂಗುಡಿಯಿಟ್ಟರು.

jk

ಯುಗಾದಿ ಹಬ್ಬ ಹಾಗೂ ವಾರಾಂತ್ಯದ ರಜೆ ಕಾರಣ, ಮೈಸೂರಿಗೆ ಪರ ಸ್ಥಳಗಳಿಂದ ಸೋಂಕಿತರು ಆಗಮಿಸಿ ಕರೋನಾ ಹರಡುತ್ತಾರೆ ಎಂಬುದು ಜಿಲ್ಲಾಧಿಕಾರಿ ಭಯವಾಗಿತ್ತು. ಜೊತೆಗೆ ಹಬ್ಬದ ಸಮಯದಲ್ಲಿ ಸೋಂಕಿನ ಕ್ಯಾರಿಯರ್‌ಗಳಾಗಿ ಅವರು ಹೋಗುವ ಸ್ಥಳಕ್ಕೆ ಹಬ್ಬಿಸಬಹುದು ಎಂಬ ಭಯವೂ ಇತ್ತು. ಎಲ್ಲಕ್ಕಿಂತಲೂ ಮಿಗಿಲಾಗಿ ಕೋವಿಡ್ ಸೋಂಕಿತರ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿ, ಗ್ರಾಮೀಣ ಪ್ರದೇಶಗಳಿಗೆ ಹಬ್ಬಿದರೆ ನಿಭಾಯಿಸುವ ಅಥವಾ ನಿರ್ವಹಿಸುವ ವ್ಯವಸ್ಥೆ ಅಷ್ಟಾಗಿ ಇಲ್ಲ ಎಂಬುದು ಆತಂಕಕ್ಕೆ ಕಾರಣವಾಗಿತ್ತು.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಮ್ಮ ಆದೇಶವನ್ನು ಏಪ್ರಿಲ್ ೮ರಂದು ಹೊರಡಿಸಿದರು. ಉಗಾದಿ ಹಬ್ಬ ಏಪ್ರಿಲ್ ೧೩ರಂದು ಇತ್ತು. ಅಂದರೆ ಇದಕ್ಕಿಂತಲೂ ಮುಂಚಿತವಾಗಿಯೇ ಆಲೋಚಿಸಿ ತೆಗೆದುಕೊಂಡಿದ್ದಂತಹ ನಿರ್ಧಾರವಾಗಿತ್ತು ಎನ್ನುವುದು ಗಮನಾರ್ಹ.

ಏಪ್ರಿಲ್ ೧೦ ರಿಂದ ಏಪ್ರಿಲ್ ೨೦ನೇ ತಾರೀಖಿನವರೆಗೆ ತಮ್ಮ ಆದೇಶ ಪಾಲಿಸಿದರೆ ಒಳಿತು ಎನ್ನುವುದು ಅವರ ಅಭಿಪ್ರಯವಾಗಿತ್ತು. ಪ್ರತಿ ದಿನ ಮೈಸೂರಿಗೆ ೫,೦೦೦ಕ್ಕೂ ಹೆಚ್ಚಿನ ಸಂಖ್ಯೆಯ ವಾಹನಗಳು ಅಗಮಿಸುತ್ತವೆ ಮತ್ತು ಸರಣಿ ರಜೆಗಳ ಕಾರಣದಿಂದಾಗಿ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ ಎಂಬು ಎಚ್ಚರಿಕೆ ಸಹ ನೀಡಿದ್ದರು.

worship-God-Corona-under-control-Called-mood-Must go-District Collector-Rohini Sindhuri 

ಏಪ್ರಿಲ್ ೮ರಂದು ಅವರು ತಮ್ಮ ನಿರ್ಬಂಧದ ಆದೇಶವನ್ನು ಹೊರಡಿಸಿದಾಗ ಮೈಸೂರಿನಲ್ಲಿ ಪ್ರತಿ ದಿನ ೨೪೩ ಕೋವಿಡ್ ಸೋಂಕಿನ ಪ್ರಕರಣಗಳು ವರದಿಯಾಗುತ್ತಿದ್ದವು. ಏಪ್ರಿಲ್ ೨೨ರಂದು ಇದರ ಸಂಖ್ಯೆ ೮೧೮ಕ್ಕೆ ಏರಿತು. ಜಿಲ್ಲಾಧಿಕಾರಿ ಆದೇಶ ಹೊರಡಿಸಿ, ಅದನ್ನು ರದ್ದುಪಡಿಸಿದಾಗಿನಿಂದ ಈವರೆಗೆ ಮೈಸೂರಿನಲ್ಲಿ ಒಟ್ಟು ೬೭ ಮಂದಿ ಸಾವನ್ನಪ್ಪಿದ್ದಾರೆ.

ಸರ್ಕಾರ ಈಗೇನು ಮಾಡುತ್ತಿದೆಯೋ ಅದನ್ನು ಏಪ್ರಿಲ್ ತಿಂಗಳ ಎರಡನೆಯ ವಾರದಿಂದಲೇ ಕ್ರಮಗಳನ್ನು ಕೈಗೊಂಡಿದ್ದರೆ ಪರಿಸ್ಥಿತಿ ಇಷ್ಟೊಂದು ಹದಗೆಡುತ್ತಿರಲಿಲ್ಲ. ಆಗ ಸರ್ಕಾರ ಜಿಲ್ಲಾಧಿಕಾರಿ ಆದೇಶವನ್ನು ತಳ್ಳಿಹಾಕದೇ, ಈಗ ಕೈಗೊಂಡಿರುವAತಹ ನಿಯಮಗಳನ್ನು (ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ) ಎರಡು ವಾರಗಳ ಹಿಂದೆಯೇ ಕೈಗೊಂಡಿದ್ದರೆ ಪರಿಸ್ಥಿತಿ ಕೈಮೀರುತ್ತಿರಲಿಲ್ಲ.

April 10-20 Mysore-tourist-destinations-visit-Corona-Negative-Reporting-Mandatory-DC-Rohini Sindhuri

ಆದರೆ ‘ ಊರೇ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು…’ ಎಂಬಂತೆ ಪರಿಸ್ಥಿತಿ ಕೈಮೀರಿದ ಮೇಲೆ ಕ್ರಮ ತೆಗೆದುಕೊಂಡರೇನು ಫಲ..?

 

key words : mysore-DC-Rohini Sindhuri-karnataka